ಹಿಂದುಳಿದ ಹಣೆಪಟ್ಟಿ ತೊಲಗುವುದು ಅಗತ್ಯ

7
ಕಾಲೇಜು ವಾರ್ಷಿಕೋತ್ಸವ, ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರಜಾಕ್ ಉಸ್ತಾದ್ ಹೇಳಿಕೆ

ಹಿಂದುಳಿದ ಹಣೆಪಟ್ಟಿ ತೊಲಗುವುದು ಅಗತ್ಯ

Published:
Updated:

ರಾಯಚೂರು: ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಹೊರ ಬರಲು ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371 (ಜೆ) ಕಾಯ್ದೆಯನ್ನು ಸಮರ್ಪಕ ಅನುಷ್ಠಾನ ಅವಶ್ಯ ಎಂದು ಎಸ್‌ಎಲ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ರಜಾಕ್‌ ಉಸ್ತಾದ್‌ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2017– 18ನೇ ಸಾಲಿನ ಬಿ.ಎ. ಹಾಗೂ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹಲವು ಕ್ಷೇತ್ರಗಳಲ್ಲಿ ಈ ಭಾಗ ಬಹುಕಾಲದಿಂದ ಹಿಂದುಳಿಯಲು, ಇದಕ್ಕೆ ಸ್ಥಳೀಯ ನಾಯಕರ ಹಿತಾಸಕ್ತಿ ಕೊರತೆ ಕಾರಣವಾಗಿದೆ. ಹಲವು ಶರಣರು ಹಾಗೂ ಸಾಹಿತಿಗಳು ಜನಿಸಿದ ಪುಣ್ಯಭೂಮಿಯಾಗಿದ್ದರೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಆದರೆ, 371 (ಜೆ) ಕಾಯ್ದೆಯೂ ಸಮರ್ಪಕವಾಗಿ ಅನುಷ್ಠಾನವಾಗದ ಪರಿಣಾಮ ಈ ಭಾಗ ಅಭಿವೃದ್ಧಿ ಹೊಂದುತ್ತಿಲ್ಲ ಎಂದರು.

ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಈ ಭಾಗ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಸಂದೇಹವಿಲ್ಲ. ವಿದ್ಯಾರ್ಥಿಗಳು ಕೂಡ ಒಂದು ಭಾಗಕ್ಕೆ ಸೀಮಿತವಾಗದೇ ವಿವಿಧ ಭಾಗಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಉನ್ನತ ಸ್ಥಾನಕ್ಕೆರಬೇಕಾದರೆ ಕಠಿಣ ಪರಿಶ್ರಮ ದೃಢ ನಿರ್ಧಾರಗಳಿಂದ ಮಾತ್ರ ಸಾಧ್ಯವಿದ್ದು, ನಿಷ್ಠೆ ಮತ್ತು ಛಲದಿಂದ ಅಭ್ಯಾಸಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಾಂಡುರಂಗ ಮಾತನಾಡಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಗುಣ ಬಸವರಾಜ ವಾರ್ಷಿಕ ವರದಿ ವಾಚನ ಮಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ ಪ್ರಾಸ್ತಾವಿಕ ಮಾತನಾಡಿದರು.

ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಕೂಡ ವಿತರಿಸಲಾಯಿತು.

ಸಹಾಯಕ ಪ್ರಾಧ್ಯಾಪಕರಾದ ಮಲ್ಲಯ್ಯ ಅತ್ತನೂರು, ಸ್ವರೂಪರಾಣಿ, ಶರಣೆಗೌಡ, ರಂಗನಾಥ ಬಿಲ್ಲಾರ, ಸಂತೋಷಕುಮಾರ, ಸಯೀದಾ ರಶೀದಾ ಪರ್ವಿನ್, ಉಮಾದೇವಿ, ಶಿವಲಿಂಗಮ್ಮ ಇದ್ದರು. ಸಿ.ಕೆ.ಜ್ಯೋತಿ ಸ್ವಾಗತಿಸಿದರು. ಭೀಮಶಂಕರಪ್ಪ ನಿರೂಪಿಸಿ, ಹನುಮಂತ ವಂದಿಸಿದರು.

**

ವಿದ್ಯಾರ್ಥಿಗಳು ಆಧುನಿಕತೆಗೆ ಮಾರುಹೋಗದೇ ಸಿಗುವ ಸೌಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕು – ಪಾಂಡುರಂಗ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry