‘ಮಧುಮೇಹಿಗಳಿಗೂ ಮಾವು ಸಿಹಿ’

7

‘ಮಧುಮೇಹಿಗಳಿಗೂ ಮಾವು ಸಿಹಿ’

Published:
Updated:
‘ಮಧುಮೇಹಿಗಳಿಗೂ ಮಾವು ಸಿಹಿ’

ಬೇಸಿಗೆ ಕಾಲಕ್ಕೂ ‘ಹಣ್ಣುಗಳ ರಾಜ’ ಮಾವಿನಹಣ್ಣಿಗೂ ಅವಿನಾಭಾವ ಬಂಧ. ಮಾವಿನಹಣ್ಣಿನಲ್ಲಿ ಏನೆಲ್ಲಾ ಆರೋಗ್ಯಕರ ಅಂಶಗಳಿವೆ ಎಂಬುದನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ ಆರೋಗ್ಯಧಾಮದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಡಾ.ಮೇಘನಾ.

ಮಧುಮೇಹಿಗಳಿಗೆ ಆಹಾರದಲ್ಲಿ ಪಥ್ಯ ಮಾಡಬೇಕು ಎಂದು ನಾವು ಹೇಳುತ್ತೇವೆ. ಆದರೆ ನಿಗದಿತ ಸಮಯದಲ್ಲಿ ಮಾತ್ರ ಸಿಗುವ ಮಾವಿನಹಣ್ಣು ತಿನ್ನಲಾಗದೆ ಮಧುಮೇಹಿಗಳು ಒದ್ದಾಡುತ್ತಾರೆ. ಬಣ್ಣ ಮತ್ತು ಸುವಾಸನೆಯಿಂದಲೇ ಎಲ್ಲರನ್ನೂ ಆಕರ್ಷಿಸುವ ಮಾವು ಮಧುಮೇಹಿಗಳೂ ತಿನ್ನಬಹುದು. ಆದರೆ ಹಣ್ಣು ತಿಂದ ದಿನ ಮತ್ತು ಮರುದಿನ ಸ್ವಲ್ಪ ಕಟ್ಟುನಿಟ್ಟಾಗಿ ಪಥ್ಯ ಮಾಡಬೇಕಾಗುತ್ತದೆ. ಅಂದರೆ, ಊಟಕ್ಕೆ ಮುನ್ನವೇ ಮಾವಿನಹಣ್ಣು ತಿನ್ನುವುದು ಸೂಕ್ತ. ಅಲ್ಲದೆ ರಕ್ತದಲ್ಲಿನ ಗ್ಲುಕೋಸ್‌ ಅಂಶವನ್ನು ಹೆಚ್ಚಿಸುವ ಅನ್ನ ಮತ್ತು ಇತರ ಆಹಾರವನ್ನು ಸೇವಿಸಬಾರದು. ಮಾವಿನ ಚಿಗುರೆಲೆಗಳನ್ನು ನಿತ್ಯವೂ ಸೇವಿಸುವುದರಿಂದ ಆರಂಭಿಕ ಹಂತದ ಮಧುಮೇಹವನ್ನು ತಡೆಯಬಹುದು ಎಂದು ಅವರು ವಿವರಿಸುತ್ತಾರೆ.

ಹೀಟ್ ಸ್ಟ್ರೋಕ್‌ಗೆ ಮದ್ದು: ಬೇಸಿಗೆಯಲ್ಲಿ ತೇವಾಂಶ ಕಡಿಮೆ ಇರುವುದರಿಂದ ಹದಿಹರೆಯದವರು (19ರ ಒಳಗೆ) ಮತ್ತು ಮಹಿಳೆಯರಿಗೆ  ಸುಲಭವಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುತ್ತದೆ. ವಿಪರೀತ ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತದೆ. ಇದನ್ನು ಹೀಟ್‌ ಸ್ಟ್ರೋಕ್‌ ಅಥವಾ ಸೂರ್ಯಾಘಾತ ಎನ್ನುತ್ತೇವೆ. ಮಾವಿನ ಹಣ್ಣಿನ ಸೇವನೆ ಈ ಸ್ಟ್ರೋಕ್‌ಗೆ ಉತ್ತಮ ಮದ್ದು.

ಕೊಬ್ಬು ನಿಯಂತ್ರಕ: ಮಾವಿನಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಪಿಕ್ಟಿನ್, ನಾರಿನಾಂಶ ಕೊಬ್ಬು ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ.

ಮಕ್ಕಳಿ‌ಗೆ ಒಳ್ಳೆಯದು: ಬೇಸಿಗೆ ರಜೆಯಲ್ಲಿ ಮಕ್ಕಳು ಹೊರಗೆ ಬಿಸಿಲಿನಲ್ಲಿ ಆಡುವುರಿಂದ ನಿರ್ಜಲೀಕರಣ ಉಂಟಾಗುತ್ತದೆ. ಮಾವಿನಹಣ್ಣು ನಿರ್ಜಲೀಕರಣವನ್ನು ಹೋಗಲಾಡಿಸುತ್ತದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾವಿನಹಣ್ಣನ್ನು ಕೊಡಬಹುದು. ಒಂದೇ ತುಂಡು ಮಾತ್ರ ತಿನ್ನಿಸಿ. ಮೂರು ವರ್ಷದ ಮಗುವಿಗೆ ಸಣ್ಣ ಗಾತ್ರದ ಒಂದು ಮಾವಿನಹಣ್ಣನ್ನು ತಿನ್ನಲು ಕೊಡಬಹುದು. ಮಕ್ಕಳಿಗೆ ಜೀರ್ಣಕ್ರಿಯೆ ಬೇಗ ಆಗದ ಕಾರಣ ಮಾವಿನಹಣ್ಣು ಹೆಚ್ಚು ತಿನ್ನಲು ಕೊಡದಿರಿ.

ಪುರುಷ: ಪ್ರೊಸ್ಟೇಟ್ ಕ್ಯಾನ್ಸರ್‌ ಮತ್ತು ಒತ್ತಡದಿಂದ ಬರುವ ತಲೆನೋವಿಗೆ ಶಮನಕಾರಿ.

ಇತರ ಔಷಧೀಯ ಗುಣ: ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ಒಂದು ಲೋಟ ನೀರಿಗೆ ಒಂದು ಚಮಚ ಒಣಗಿದ ಮಾವಿನೆಲೆಯ ಪುಡಿ ಮತ್ತು ತುಸು ಜೇನುತುಪ್ಪ ಬೆರೆಸಿ ಕುಡಿಯಬೇಕು. ಮಾವಿನೆಲೆಯ ಪುಡಿಯ ಡಿಕಾಕ್ಷನ್ ಆಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಉತ್ತಮ ಔಷಧಿ. 

 

ಹೀಗೆ ಮಾಡಿ

ಮಾವು ಹಣ್ಣಾಗಲು ರಾಸಾಯನಿಕ ಪದಾರ್ಥಗಳನ್ನು ಸಿಂಪಡಿಸುತ್ತಾರೆ. ಇದರ ನಿವಾರಣೆಗಾಗಿ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಅದರಲ್ಲಿ 15 ನಿಮಿಷಗಳ ಕಾಲ ಮಾವಿನಹಣ್ಣುಗಳನ್ನು ಮುಳುಗಿಸಿಡಿ. ನಂತರ ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಹಣ್ಣನ್ನು ತಿನ್ನಿ. ಸಾಧ್ಯವಾದಷ್ಟೂ ಸಿಪ್ಪೆಯನ್ನೂ ತಿನ್ನಬೇಡಿ. ಬರೀ ಹಣ್ಣನ್ನು ಮಾತ್ರ ತಿನ್ನಿ.

ಆದಷ್ಟು ನಮ್ಮ ರಾಜ್ಯ ಇಲ್ಲವೇ ನೆರೆಹೊರೆ ಬೆಳೆದ ಮಾವಿನ ಹಣ್ಣುಗಳನ್ನೇ ತಿನ್ನಿ. ಇತರ ದೇಶಗಳ ಮಾವಿನ ಹಣ್ಣು ಸೇವನೆ ಬೇಡ. ನಮ್ಮ ಹವಾಗುಣಕ್ಕನುಗಣವಾಗಿ ಬೆಳೆದ ಮಾವು, ನಮ್ಮ ದೇಹಕ್ಕೆ ಸೂಕ್ತ

ಹೀಗೆ ಮಾಡಬೇಡಿ

* ಮಾವಿನಹಣ್ಣನ್ನು ಎಂದಿಗೂ ಬಿಸಿ ಆಹಾರ ಪದಾರ್ಥಗಳ ಜತೆ ಮಿಶ್ರಣ ಮಾಡಿ ಸೇವಿಸಬೇಡಿ. ಸೀಕರಣೆ ತಯಾರಿಸುವಾಗ ಬಿಸಿಹಾಲಿನೊಂದಿಗೆ ಬಾಳೆಹಣ್ಣು ಮತ್ತು ಮಾವಿನ ಹಣ್ಣನ್ನು ಬೆರೆಸದಿರಿ. ಮಾವಿನಲ್ಲಿರುವ ಹುಳಿ ಅಂಶದಿಂದಾಗಿ ಹಾಲು ಒಡೆಯುತ್ತದೆ.

* ಬಿಸಿ ಹೋಳಿಗೆ ಜತೆಗೆ ಮಾವಿನ ಸೀಕರಣೆ ಸೇವಿಸದಿರಿ. ಹೋಳಿಗೆ ತಣ್ಣಾಗಾದ ಮೇಲೆಯೇ ತಿನ್ನಿ

* ಮೊಸರಿನೊಂದಿಗೆ ಎಂದಿಗೂ ಮಾವಿನಹಣ್ಣನ್ನು ತಿನ್ನಬೇಡಿ

* ಸಹಜವಾಗಿಯೇ ಸಿಹಿ ಇರುವ ಮಾವಿನೊಂದಿಗೆ ಬೆಲ್ಲ, ಸಕ್ಕರೆ ಬೆರೆಸಬೇಡಿ

ಮಾವಿನ ಹಣ್ಣಿನಲ್ಲೇನಿದೆ?

* ಕ್ಯಾಲೊನಿ–105

* ವಿಟಮಿನ್ ಸಿ– 76

* ವಿಟಮಿನ್ ಎ– 25

* ವಿಟಮಿನ್ ಬಿ6, ಬಿ–11

* ನಾರಿನಾಂಶ– 9

* ಪೊಟಾಸಿಯಂ–7

* ಮ್ಯಾಗ್ನೇಶಿಯಂ–4

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry