ಅಂಚೆಚೀಟಿಯಲ್ಲಿ ನಮ್ಮ ರಾಜಣ್ಣ

4

ಅಂಚೆಚೀಟಿಯಲ್ಲಿ ನಮ್ಮ ರಾಜಣ್ಣ

Published:
Updated:
ಅಂಚೆಚೀಟಿಯಲ್ಲಿ ನಮ್ಮ ರಾಜಣ್ಣ

ವರನಟ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಅನೇಕ ಮೊದಲುಗಳ ಸೃಷ್ಟಿಗೆ ಕಾರಣರಾದವರು. ಭಾರತೀಯ ಚಿತ್ರ ಜಗತ್ತಿನ ಪಿತಾಮಹ ಎಂದೇ ಖ್ಯಾತರಾದ ದಾದಾ ಸಾಹೇಬ್ ಫಾಲ್ಕೆ ನೆನಪಿನ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ರಾಜ್‌ಕುಮಾರ್ ಅಂಚೆ ಇಲಾಖೆಯ ಸ್ಮರಣೀಯ ಅಂಚೆಚೀಟಿಗಳಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಪ್ರತಿಭಾವಂತ.

ಕೇಂದ್ರ ಸರ್ಕಾರ 2009ರಲ್ಲಿ ಈ ಅಭಿಜಾತ ಕಲಾವಿದನ ಗೌರವಾರ್ಥ ಸ್ಮರಣೀಯ ಅಂಚೆ ಚೀಟಿಯನ್ನು ಹೊರತಂದಿತು. ಅದೇ ಸಂದರ್ಭದಲ್ಲಿ ಬೇಡರ ಕಣ್ಣಪ್ಪನಿಂದ ಹಿಡಿದು ಶಬ್ದವೇದಿಯವರೆಗೆ ಡಾ. ರಾಜ್‌ಕುಮಾರ್ ನಡೆದು ಬಂದ ಹಾದಿಯನ್ನು ಸಂಕೇತಿಸುವ ಆರು ಚಲನಚಿತ್ರಗಳ ಸ್ಥಿರ ಚಿತ್ರಗಳನ್ನು ಒಳಗೊಂಡ ಮೊದಲ ದಿನ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು.

ನಮ್ಮಿಂದ ದೂರವಾಗಿ ದಶಕವೇ ಕಳೆದರೂ ನಮ್ಮ ಮನದಾಳದಲ್ಲಿ ನೆಲೆನಿಂತ ಅವರ ಚಿತ್ರ ಮಾತ್ರ ಎಂದಿಗೂ ಮಸುಕಾಗದು.

–ಎನ್. ಜಗನ್ನಾಥ ಪ್ರಕಾಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry