ಎನ್‌ಪಿಎಸ್‌: ಮೊಬೈಲ್‌ ಸಂಖ್ಯೆ ಕಡ್ಡಾಯ

7

ಎನ್‌ಪಿಎಸ್‌: ಮೊಬೈಲ್‌ ಸಂಖ್ಯೆ ಕಡ್ಡಾಯ

Published:
Updated:
ಎನ್‌ಪಿಎಸ್‌: ಮೊಬೈಲ್‌ ಸಂಖ್ಯೆ ಕಡ್ಡಾಯ

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ಚಂದಾದಾರರು ತಮ್ಮ ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಖ್ಯೆಯ ವಿವರ ನೀಡುವುದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಕಡ್ಡಾಯ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಮಾರ್ಗದರ್ಶಿ ಸೂತ್ರದ ಅನ್ವಯ ಈ ನಿಬಂಧನೆ ಅನ್ವಯಗೊಳ್ಳಲಿದೆ. ‘ಎನ್‌ಪಿಎಸ್‌’ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರಲು ಪ್ರಾಧಿಕಾರವು ಕಾಲ ಕಾಲಕ್ಕೆ ನಿಯಮಗಳನ್ನು ಸರಳಗೊಳಿಸುತ್ತ ಬಂದಿದೆ. ಖಾತೆ ತೆರೆಯುವ, ಹಣ ವಾ‍ಪಸ್‌ ಪಡೆಯುವ ಮತ್ತು ಕುಂದುಕೊರತೆಗಳ ನಿರ್ವಹಣೆ ಸುಲಭಗೊಳಿಸಲು ಆದ್ಯತೆ ನೀಡುತ್ತಿದೆ.

ಯೋಜನೆಯ ಸದಸ್ಯರು ತಮ್ಮ ಎನ್‌ಪಿಎಸ್‌ ಖಾತೆಯನ್ನು ಸುಲಭವಾಗಿ ನಿರ್ವಹಿಸಲು ಮತ್ತು ಯಾವುದೇ ಅಡಚಣೆ ಇಲ್ಲದೇ ಯೋಜನೆಯಿಂದ ಹೊರ ಹೋಗಲು ಬ್ಯಾಂಕ್ ಖಾತೆ ಮತ್ತು ಮೊಬೈಲ್‌ ವಿವರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಹೊಸ ಅರ್ಜಿ ನಮೂನೆಯಲ್ಲಿ ಈ ಮಾಹಿತಿ ಕಡ್ಡಾಯ ಮಾಡಲಾಗಿದೆ. ಹೊಸ ಸದಸ್ಯರು ಈ ವಿವರ ಭರ್ತಿ ಮಾಡಬೇಕು. ಹಾಲಿ ಚಂದಾದಾರರೂ ಈ ವಿವರಗಳನ್ನು ಅಂತರ್ಜಾಲ ತಾಣದಲ್ಲಿ www.cra-nsdl.com or https://enps.karvy.com ಭರ್ತಿ ಮಾಡಬೇಕು.

ಕಡ್ಡಾಯವಾಗಿ ಭರ್ತಿ ಮಾಡಬೇಕಾದ ವಿವರಗಳನ್ನು ದಾಖಲಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದೂ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry