ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

7

ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

Published:
Updated:
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

ನವದೆಹಲಿ: ಮುಂಬೈನಲ್ಲಿರುವ ತಮ್ಮ ಏಳು ವಸತಿ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರದ ವಿರುದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತಾಯಿ ಅಮಿನಾ ಬಿ ಕಸ್ಕರ್‌ ಮತ್ತು ಸೋದರಿ ಹಸೀನಾ ಪಾರ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಸ್ವತ್ತುಗಳನ್ನು ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿರುವ ಈ ಏಳರಲ್ಲಿ ಎರಡು ಕಟ್ಟಡಗಳು ಅಮಿನಾ ಬಿ ಅವರ ಹೆಸರಿನಲ್ಲಿ ಮತ್ತು ಐದು ಕಟ್ಟಡಗಳು ಹಸೀನಾ ಅವರ ಹೆಸರಿನಲ್ಲಿ ನೋಂದಣಿ ಆಗಿವೆ. ಇವುಗಳನ್ನು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ದಾಖಲಾತಿ ಕೊಡದ ಕಾರಣ ಸರ್ಕಾರ 1988ರಲ್ಲಿ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿತ್ತು.

‘ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ವಂಚಕರ ಆಸ್ತಿ ಮುಟ್ಟುಗೋಲು ಕಾಯ್ದೆ’ ಅಡಿ ಇವುಗಳ ಮುಟ್ಟುಗೋಲಿಗೆ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಇದರ ವಿರುದ್ಧ ದಾವೂದ್‌ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಆನಂತರ ಇಬ್ಬರೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry