ಸೆಮಿಫೈನಲ್‌ಗೆ ನಡಾಲ್‌

7

ಸೆಮಿಫೈನಲ್‌ಗೆ ನಡಾಲ್‌

Published:
Updated:
ಸೆಮಿಫೈನಲ್‌ಗೆ ನಡಾಲ್‌

ಮೊನ್ಯಾಕೊ: ಸ್ಪೇನ್‌ನ ರಫೆಲ್ ನಡಾಲ್‌ ಮತ್ತು ಬಲ್ಗೇರಿಯಾದ ಗ್ರಿಗರಿ ದಿಮಿಟ್ರೊವ್‌ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.

ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ನಡಾಲ್‌ ಆಸ್ಟ್ರೇಲಿಯಾದ ಡೊಮಿನಿಕ್‌ ಥೀಮ್‌ ಎದುರು 6–0, 6–2ರಿಂದ ಗೆದ್ದರೆ, ದಿಮಿಟ್ರೊವ್‌ ಬೆಲ್ಜಿಯಂನ ಡೇವಿಡ್ ಗಫಿನ್ ಅವರನ್ನು 6–4, 7–6 (7/5)ರಿಂದ ಮಣಿಸಿದರು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನೊವಾಕ್‌ ಜೊಕೊವಿಚ್ ಅವರನ್ನು ಮಣಿಸಿದ್ದ ಡೊಮಿನಿಕ್ ಥೀಮ್‌ ಶುಕ್ರವಾರ ನಿರಾಸೆಗೆ ಒಳಗಾದರು. 11ನೇ ಪ್ರಶಸ್ತಿಯತ್ತ ಹೆಜ್ಜೆ ಹಾಕಿರುವ ನಡಾಲ್‌ ಏಕಪಕ್ಷೀಯ ಪಂದ್ಯದಲ್ಲಿ ಗೆದ್ದರು. ಮೊದಲ ಸೆಟ್‌ನಲ್ಲಿ ಒಂದು ಗೇಮ್ ಕೂಡ ಗೆಲ್ಲದ ಥೀಮ್ ಪಂದ್ಯದ 10ನೇ ಗೇಮ್‌ನಲ್ಲಿ ಮೊದಲ ಪಾಯಿಂಟ್‌ ಗಳಿಸಿದರು.

ಆದರೂ ಸೆಟ್‌ನಲ್ಲಿ 2–6ರ ಸೋಲು ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಶನಿವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಗ್ರಿಗರಿ ದಿಮಿಟ್ರೊವ್‌ ಅವರನ್ನು ನಡಾಲ್‌ ಎದುರಿಸುವರು.

ಗಫಿನ್‌ಗೆ ಸೋಲುಣಿಸಿದ ದಿಮಿಟ್ರೊವ್‌: ರೋಚಕ ಹೋರಾಟ ಕಂಡ ಎರಡನೇ ಸೆಟ್‌ನಲ್ಲಿ ಅಮೋಘ ಜಯ ಸಾಧಿಸಿದ ಗ್ರಿಗರಿ ದಿಮಿಟ್ರೊವ್ ಸೆಮಿಫೈನಲ್‌ಗೆ ಪ್ರವೇಶಿಸಿದರು. ಮೊದಲ ಸೆಟ್‌ನ ಆರಂಭದಲ್ಲೇ ದಿಮಿಟ್ರೊವ್‌ ಉತ್ತಮ ಲಯ ಕಂಡುಕೊಂಡರು. ಹೀಗಾಗಿ 6–4ರಿಂದ ಸೆಟ್‌ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಅವರಿಗೆ ತೀವ್ರ ಪೈಪೋಟಿ ಎದುರಾಯಿತು.

ಒಂದು ಹಂತದಲ್ಲಿ ಗಫಿನ್‌ 5–1ರ ಮುನ್ನಡೆ ಸಾಧಿಸಿದರು. ನಂತರ ಪಂದ್ಯ ಕುತೂಹಲಕರ ಘಟ್ಟಕ್ಕೆ ಸಾಗಿತು. ಮೂರು ಸೆಟ್‌ ಪಾಯಿಂಟ್‌ಗಳನ್ನು ಕೈಚೆಲ್ಲಿದ ಗಫಿನ್‌ ಪಂದ್ಯವನ್ನು ಟೈ ಬ್ರೇಕರ್‌ನತ್ತ ಕೊಂಡೊಯ್ದರು. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡ ದಿಮಿಟ್ರೊವ್‌ ಗೆದ್ದು ಬೀಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry