ವ್ಯವಸ್ಥೆ ಅಂದರೆ ನಾವೇ...

7

ವ್ಯವಸ್ಥೆ ಅಂದರೆ ನಾವೇ...

Published:
Updated:
ವ್ಯವಸ್ಥೆ ಅಂದರೆ ನಾವೇ...

ನಾವು ನಮ್ಮ ವ್ಯವಸ್ಥೆಯನ್ನು ಯಾವಾಗಲೂ ದೂಷಿಸುತ್ತಾ ಇರುತ್ತೇವೆ. ಆದರೆ ವ್ಯವಸ್ಥೆ ಅಂದರೆ ನಾವೇ ಎಂಬುದನ್ನು ಮರೆಯುತ್ತೇವೆ. ನಮ್ಮಲ್ಲಿರುವ ಅವ್ಯವಸ್ಥೆಯೇ ‘ವ್ಯವಸ್ಥೆ’ಯಲ್ಲಿರುವ ಅವ್ಯವಸ್ಥೆಯಾಗಿ ಕಾಣಿಸುತ್ತಿರುತ್ತದೆ.

ನಾವು ಜಾತಿ ನೋಡಿ ವೋಟು ಹಾಕುವ ಬದಲು, ನಮ್ಮ ನೆಲ–ಜಲ ಉಳಿಸುವವರಿಗೆ ವೋಟು ಹಾಕಿದರೆ ನಮಗೇ ಒಳ್ಳೆಯದಾಗುತ್ತದೆ. ಆದರೆ, ನಾವು ನಮ್ಮ ಜಾತಿ–ಧರ್ಮಗಳನ್ನು ಮೀರಿ ಮೇಲೇಳದಿರುವುದು ನಮ್ಮಲ್ಲಿರುವ ಅವ್ಯವಸ್ಥೆಯ ದ್ಯೋತಕ.

ನಮ್ಮನ್ನು ಸರಿಮಾಡಿಕೊಳ್ಳಲು ಇರುವ ದೊಡ್ಡ ಅಸ್ತ್ರ ಮತ ಚಲಾವಣೆ. ಈಗ ನಾವು ನಮ್ಮ ಸ್ವಾರ್ಥವನ್ನು ಬಿಟ್ಟು ನಾಡು, ದೇಶ, ಭಾಷೆಯ ಒಳಿತಿಗಾಗಿ ವೋಟು ಹಾಕಬೇಕು. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ.

–ರಾಜ್ ಬಿ. ಶೆಟ್ಟಿ, ನಟ ಮತ್ತು ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry