‘ಇಲ್ಲಿನ ಅಭ್ಯರ್ಥಿ ನೆಪ ಮಾತ್ರಕ್ಕೆ’: ಡಿ.ಕೆ.ಶಿವಕುಮಾರ್‌

7

‘ಇಲ್ಲಿನ ಅಭ್ಯರ್ಥಿ ನೆಪ ಮಾತ್ರಕ್ಕೆ’: ಡಿ.ಕೆ.ಶಿವಕುಮಾರ್‌

Published:
Updated:
‘ಇಲ್ಲಿನ ಅಭ್ಯರ್ಥಿ ನೆಪ ಮಾತ್ರಕ್ಕೆ’: ಡಿ.ಕೆ.ಶಿವಕುಮಾರ್‌

ಬೆಂಗಳೂರು: ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಷ್ಮಾ ರಾಜಗೋಪಾಲರೆಡ್ಡಿ ನೆಪಕ್ಕೆ ಮಾತ್ರ ಅಭ್ಯರ್ಥಿ. ರಾಹುಲ್‌ ಗಾಂಧಿ ಹಾಗೂ ನಾನೇ ಇಲ್ಲಿ ಅಭ್ಯರ್ಥಿ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಸುಷ್ಮಾ ರಾಜಗೋಪಾಲ್ ರೆಡ್ಡಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಐದು ವರ್ಷಗಳ ಹಿಂದೆ ಬಸವ ಜಯಂತಿಯ ದಿನದಂದೇ ಕಾಂಗ್ರೆಸ್‌ ಅಧಿಕಾರ ಸ್ವೀಕರಿಸಿತ್ತು. ಅಕ್ಷಯ ತೃತಿಯ ನಮಗೆ ಶುಭಸೂಚನೆ. ಜೊತೆಗೆ ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಕಾಂಗ್ರೆಸ್ ಪರವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಗೆಲವು ನಮ್ಮದೇ ಭರವಸೆ ವ್ಯಕ್ತಪಡಿಸಿದರು.

ಗೃಹಸಚಿವ ರಾಮಲಿಂಗಾರೆಡ್ಡಿ, ‘ಕೇಂದ್ರ ಸಚಿವ ಅನಂತಕುಮಾರ್ ಇದೇ ಭಾಗವನ್ನು ಪ್ರತಿನಿಧಿಸುತ್ತಾರೆ. ಆದರೆ, ಕ್ಷೇತ್ರಕ್ಕೆ ಅವರು ಬರುವುದೇ ಅಪರೂಪ’ ಎಂದು ಲೇವಡಿ ಮಾಡಿದರು.

ಅಭ್ಯರ್ಥಿ ಸುಷ್ಮಾ, ‘ನನ್ನನ್ನು ಮತದಾರರು ಆರಿಸಿ ಕಳಿಸಿದ್ದೇ ಆದಲ್ಲಿ ಅದು ನಿಮ್ಮದೇ ಜಯವಾಗಲಿದೆ. ನಾನು ಹೊರಗಿನವಳಲ್ಲ, ನನ್ನ ಮನೆ ಹೊಂಗಸಂದ್ರದಲ್ಲಿದೆ’ ಎಂದರು. ಸಭೆ ಬಳಿಕ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry