6 ಬೋಗಿಗಳ ಮೆಟ್ರೊ: ಸಿಆರ್‌ಎಸ್‌ ಪರೀಕ್ಷೆ ಪೂರ್ಣ

7

6 ಬೋಗಿಗಳ ಮೆಟ್ರೊ: ಸಿಆರ್‌ಎಸ್‌ ಪರೀಕ್ಷೆ ಪೂರ್ಣ

Published:
Updated:
6 ಬೋಗಿಗಳ ಮೆಟ್ರೊ: ಸಿಆರ್‌ಎಸ್‌ ಪರೀಕ್ಷೆ ಪೂರ್ಣ

ಬೆಂಗಳೂರು: ಆರು ಬೋಗಿಗಳನ್ನು ಒಳಗೊಂಡ ಮೆಟ್ರೊ ರೈಲಿನ ಸುರಕ್ಷತಾ ಪರೀಕ್ಷೆಯನ್ನು ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತರು ಪೂರ್ಣಗೊಳಿಸಿದ್ದಾರೆ.

ಬೋಗಿಗಳ ವಿನ್ಯಾಸ, ಬ್ರೇಕಿಂಗ್‌ ವ್ಯವಸ್ಥೆ ಹಾಗೂ ಅತ್ಯಂತ ವೇಗದಲ್ಲಿ ರೈಲಿನ ನಿರ್ವಹಣೆ ಕುರಿತು ಅವರು ಗುರುವಾರ ರಾತ್ರಿ ಹಾಗೂ ಶುಕ್ರವಾರ ಪರಿಶೀಲನೆ ನಡೆಸಿದರು.

ಆರು ಬೋಗಿಗಳನ್ನು ಹೊಂದಿರುವ ಮೆಟ್ರೊ ರೈಲು ಇನ್ನಷ್ಟು ತಪಾಸಣೆಗಳಿಗೆ ಒಳಪಡಬೇಕಿದೆ. ಆ ಬಳಿಕ ಸಿಆರ್‌ಎಸ್‌ ಅವರಿಗೆ ಸುರಕ್ಷತಾ ಪ್ರಮಾಣ ಪತ್ರಕ್ಕಾಗಿ ಕೋರಿಕೆ ಸಲ್ಲಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಇನ್ನು ಒಂದು ತಿಂಗಳಾದರೂ ಬೇಕು ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ತಿಳಿಸಿದರು.

ಈ ರೈಲನ್ನು ಗಂಟೆಗೆ 80 ಕಿ.ಮೀ. ವೇಗದಲ್ಲಿ ಒಡಿಸಲು ಅನುಮತಿ ನೀಡುವಂತೆ ಬಿಎಂಆರ್‌ಸಿಎಲ್‌ ರೈಲ್ವೆ ಮಂಡಳಿಗೆ ಮನವಿ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry