ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಚೋಪ್ರಾಗೆ ಜೀವ ಬೇದರಿಕೆ

7

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಚೋಪ್ರಾಗೆ ಜೀವ ಬೇದರಿಕೆ

Published:
Updated:

ಸವದತ್ತಿ: ವಿಧಾನಸಭೆ ಚುನಾವಣೆಗೆ ನಿಲ್ಲದಂತೆ ಬೆದರಿಕೆ ಕರೆಗಳು ಬರುತ್ತಿವೆ. ಆದರೂ ನಾನು ಪ್ರಕರಣ ದಾಖಲಿಸಿಲ್ಲ. ಇದೀಗ ಮತ್ತಷ್ಟು ಒತ್ತಡ ಹೆಚ್ಚಾಗಿದೆ, ಆದರೂ ಸವದತ್ತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಈ ಜನರಿಗೊಸ್ಕರ ಎಲ್ಲದಕ್ಕೂ ಸಿದ್ದನಾಗಿದ್ದೇನೆ. ಚುನಾವಣೆಗೆ ನಿಂತು ಅವರೆಲ್ಲರ ಮನದಾಸೆ ನೆರವೇರಿಸುತ್ತೇನೆ’ ಎಂದು ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಆನಂದ ಚೋಪ್ರಾ ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ ವೈದ್ಯ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಆನಂದ ಚೋಪ್ರಾ ಹಾಗೂ ಜೆ.ಡಿ.ಎಸ್‌ನಿಂದ ದೊಡ್ಡಗೌಡ ಪಾಟೀಲ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಡಿ.ಎಸ್‌ ಹವಾಲ್ದಾರ ಅವರಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ಮುಖಂಡರಾದ ಪಂಚನಗೌಡ ದ್ಯಾಮನಗೌಡ್ರ, ಮಾಜಿ ಶಾಸಕ ಆರ್.ವ್ಹಿ. ಪಾಟೀಲ, ರವೀಂದ್ರ ಯಲಿಗಾರ, ಕಾಂಗ್ರೇಸ್ ಪಕ್ಷದ ಎ.ಆಯ್.ಸಿ.ಸಿ. ಕಾರ್ಯದರ್ಶಿ ದಯಾನಂದ ಪಾಟೀಲ, ಜಿ.ಪಂ ಸದಸ್ಯರಾದ ಎಂ.ಎಸ್. ಹಿರೇಕುಂಬಿ, ಪಕ್ಕೀರಪ್ಪ ಹದ್ದನ್ನವರ, ಅಶೋಕ ಕುಲಕರ್ಣಿ, ಕೆ.ಕೆ ಪುಣೇದ, ಡಿ.ಡಿ ಟೋಪೋಜಿ ಸಾತ ನೀಡಿದರು.

ಆನಂದ ಚೋಪ್ರಾ ಜೊತೆಗೆ ಪತ್ನಿ ಕಾಂತಾ ಆನಂದ ಚೋಪ್ರಾ, ಪುತ್ರ ಸೌರಭ, ಪುತ್ರಿ ಶೃತಿ, ಸಂತೋಷ ಹಾದಿಮನಿ, ಉಮೇಶಗೌಡರ, ಪರಶುರಾಮ ಗಂಟಿ, ಬಸವರಾಜ ಪ್ರಭುನವರ, ಶ್ರೀಶೈಲ ಮುತ್ತಗೊಂಡ, ಬಾಬು ಮಡ್ಲಿ, ಶಂಕರಗೌಡ ಗೋಖಾವಿ, ಬಿ.ಕೆ ರಫೀಕ, ಬಸವರಾಜ ಜಂಗನ್ನವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry