7

ಅಕ್ರಮ ಮದ್ಯ, ಗಾಂಜಾ ವಶ: 129 ಜನರ ಬಂಧನ

Published:
Updated:

ಬೀದರ್: ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 18ರ ವರೆಗೆ ಜಿಲ್ಲೆಯಲ್ಲಿ 995.500 ಲೀಟರ್ ಅಕ್ರಮ ಮದ್ಯ, 168.150 ಲೀಟರ್ ಬೀಯರ್, 84 ಲೀಟರ್ ಸೇಂದಿ ಹಾಗೂ 650 ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ ಶ್ರವಣ್‌ ತಿಳಿಸಿದ್ದಾರೆ.

ಅಕ್ರಮ ಮದ್ಯ ಶೇಖರಣೆ, ಮಾರಾಟ ಹಾಗೂ ಸಾಗಾಣಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 183 ದಾಳಿಗಳನ್ನು ನಡೆಸಿ ₹ 27.91 ಲಕ್ಷ ಮೌಲ್ಯದ ಮೂರು ವಾಹನ, 20 ದ್ವಿಚಕ್ರ ವಾಹನ ಮತ್ತು 2 ಫ್ರಿಡ್ಜ್‌ಗಳನ್ನು ಜಪ್ತಿ ಮಾಡಲಾಗಿದೆ. 153 ಪ್ರಕರಣಗಳನ್ನು ದಾಖಲಿಸಿಕೊಂಡು 129 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಅಕ್ರಮ ಅಬಕಾರಿ ಚಟುವಟಿಕೆಗಳನ್ನು ತಡೆಯುವ ದಿಸೆಯಲ್ಲಿ ಜಿಲ್ಲೆಯಲ್ಲಿ 10 ಅಬಕಾರಿ ತನಿಖಾ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ. 6 ವಿಶೇಷ ಅಬಕಾರಿ ಪ್ರಹಾರ ತಂಡ ಹಾಗೂ ಎರಡು ಫ್ಲಾಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಅಬಕಾರಿ ಸಿಬ್ಬಂದಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry