ಗ್ರಾಮೀಣರ ಬದುಕಿನಲ್ಲಿ ಗುಣಾತ್ಮಕ ಬದಲು

7
ಗದಗದ ವಿವಿಧೆಡೆ ಬಿರುಸಿನ ಪ್ರಚಾರ ಕೈಗೊಂಡ ಸಚಿವ ಎಚ್‌.ಕೆ. ಪಾಟೀಲ

ಗ್ರಾಮೀಣರ ಬದುಕಿನಲ್ಲಿ ಗುಣಾತ್ಮಕ ಬದಲು

Published:
Updated:

ಗದಗ: ‘ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗದಗ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಗ್ರಾಮೀಣ ಸಶಕ್ತೀಕರಣದ ಮಹತ್ವದ ಹೆಜ್ಜೆ ಇಡಲಾಗಿದೆ’ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಹೇಳಿದರು.

ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾಡಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ರೈತರು ನೆಮ್ಮದಿಯ ಬದುಕು ಸಾಗಿಸಲು ರಾಜ್ಯ ಸರ್ಕಾರ ಕೃಷಿಹೊಂಡ ಹಾಗೂ ರೈತರ ಸಾಲಮನ್ನಾ ಯೋಜನೆ ಬಹುದೊಡ್ಡ ಕೊಡುಗೆಯಾಗಿದೆ‘ ಎಂದರು.

ಸಾಧಿಕ್ ನರಗುಂದ, ಜಿ.ಎಂ. ದಂಡಿನ, ಎ.ಆರ್. ನದಾಫ, ಹಣಸಿ, ಸೋಮರಡ್ಡಿ ಗಿರಡ್ಡಿ, ಡಾ. ಡಿ.ಸಿ. ಗಡ್ಡಿ, ಎಂ.ಆರ್. ನಾರಪ್ಪನವರ, ಎ.ಎ. ಜಕಾತಿ, ಶಬ್ಬೀರ ಅಬ್ಬಿಗೇರಿ, ಬಸವರಾಜ ಗದಗಿನ, ಎಂ.ಆರ್. ಅಕ್ಕಿ, ಎ.ಎಸ್. ಈಳಗೇರ, ಎಂ.ಎಂ. ಹೊಸಮನಿ, ರವಿ ಮೂಲಿಮನಿ ಇದ್ದರು.

ವಿಶ್ವದರ್ಜೆಯ ಸ್ಥಾನ: ಗದುಗಿನ ಪಂಚಾಕ್ಷರಿ ನಗರದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದಲಿಂಗೇಶ್ವರಗೌಡ ಪಾಟೀಲ ಅವರ ಮನೆಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಎಚ್‌.ಕೆ ಪಾಟೀಲ ಅವರು ಮಾತನಾಡಿದರು.

ಗದಗ–-ಬೆಟಗೇರಿ ಅವಳಿ ನಗರವನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವುದೇ ಕಾಂಗ್ರೆಸ್ ಸಂಕಲ್ಪವಾಗಿದ್ದು ಈಗಾಗಲೇ ಶೇ30 ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಅವರು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಎ.ಎಸ್. ಹಿಂಡಸಗೇರಿ, ಡಿ.ಆರ್. ಪಾಟೀಲ, ಗದಗ ಜಿಲ್ಲಾ ಪಂಚಾಯ್ತಿ ವಾಸಣ್ಣ ಕುರಡಗಿ, ಬಿ.ಬಿ. ಅಸೂಟಿ, ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ಸಚಿನ್ ಪಾಟೀಲ, ಅಶೋಕ ಮಂದಾಲಿ ಇದ್ದರು.

ದೇವಾಂಗ ಸಮಾಜ: ‘ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸ ಬೇಕು’ ಎಂದು ಎಚ್.ಕೆ. ಪಾಟೀಲ ಮನವಿ ಮಾಡಿದರು.

ಬೆಟಗೇರಿಯಲ್ಲಿ ದೇವಾಂಗ ಸಮಾಜದ ವತಿಯಿಂದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶಂಕ್ರಪ್ಪ ಬರಗಿ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್ ಸೇರ್ಪಡೆ: ಹರ್ತಿ ಗ್ರಾಮದ ಬಿಜೆಪಿಯ ಕೆಲವು ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry