ಬಿಜೆಪಿಗೆ ಯಶವಂತ ಸಿನ್ಹಾ ಗುಡ್ ಬೈ

7

ಬಿಜೆಪಿಗೆ ಯಶವಂತ ಸಿನ್ಹಾ ಗುಡ್ ಬೈ

Published:
Updated:
ಬಿಜೆಪಿಗೆ ಯಶವಂತ ಸಿನ್ಹಾ ಗುಡ್ ಬೈ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಬಿಜೆಪಿ ತೊರೆದಿದ್ದಾರೆ. ಶನಿವಾರ ಪಟನಾದಲ್ಲಿ ಮಾತನಾಡಿದ ಅವರು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2016ರಲ್ಲಿ ₹500 ಮತ್ತು ₹1000 ಮುಖಬೆಲೆಯ ನೋಟು ರದ್ದು ಮಾಡಿದಾಗ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು.

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದನಿಯೆತ್ತುವ ಉದ್ದೇಶದಿಂದ ಜನವರಿಯಲ್ಲಿ  ‘ರಾಷ್ಟ್ರ ಮಂಚ್’ ಎಂಬ ವಿಚಾರ ವೇದಿಕೆಯನ್ನು ಸಿನ್ಹಾ ಆರಂಭಿಸಿದ್ದರು.

ರಾಷ್ಟ್ರ ಮಂಚ್ ಒಂದು ರಾಜಕೀಯೇತರ ವೇದಿಕೆಯಾಗಿರಲಿದೆ. ಇದು ಸಂಘಟನೆ ಅಲ್ಲ, ಬದಲಿಗೆ ಒಂದು ರಾಷ್ಟ್ರೀಯ ಚಳವಳಿ. ಯಾವುದೇ ಪಕ್ಷದ ಜತೆಗೂ ರಾಷ್ಟ್ರ ಮಂಚ್ ಗುರುತಿಸಿಕೊಳ್ಳುವುದಿಲ್ಲ. 70 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರ ಹತ್ಯೆಯಾದಾಗ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಅಂದೂ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಮೇಲೆ ದಾಳಿ ನಡೆದಿತ್ತು, ಇಂದು ಮತ್ತೆ ದಾಳಿ ನಡೆಯುತ್ತಿದೆ’ ಎಂದು ಹೇಳಿದ್ದರು.

ನವೆಂಬರ್ 6, 1937ರಂದು ಜನಿಸಿದ ಸಿನ್ಹಾ ಸಮಾಜವಾದಿ ಜಯಪ್ರಕಾಶ ನಾರಾಯಣರಿಂದ ಪ್ರಭಾವಿತರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry