ಸಚಿವ ಪ್ರಿಯಾಂಕ್‌ ಖರ್ಗೆ ಆಸ್ತಿ ದುಪ್ಪಟ್ಟು

7
ಘಟಾನುಘಟಿ ನಾಯಕರ ಬಳಿ ಕೋಟಿ, ಕೋಟಿ ಆಸ್ತಿ, ಸಚಿವರಿಬ್ಬರ ಆಸ್ತಿ ಹೆಚ್ಚಳ

ಸಚಿವ ಪ್ರಿಯಾಂಕ್‌ ಖರ್ಗೆ ಆಸ್ತಿ ದುಪ್ಪಟ್ಟು

Published:
Updated:
ಸಚಿವ ಪ್ರಿಯಾಂಕ್‌ ಖರ್ಗೆ ಆಸ್ತಿ ದುಪ್ಪಟ್ಟು

ಕಲಬುರ್ಗಿ: ಐಟಿ ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆಸ್ತಿ ಮತ್ತು ವಾರ್ಷಿಕ ವರಮಾನ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ.

ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅವರು ₹14.62 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. 2013ರಲ್ಲಿ ಅವರು ₹7.48 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು.

₹6.50 ಲಕ್ಷ ನಗದು ಇದೆ. ಪತ್ನಿ ಶ್ರುತಿ, ಪುತ್ರರಾದ ಅಮಿತವ ಮತ್ತು ಆಕಾಂಕ್ಷ ಅವರ ಹೆಸರಿನಲ್ಲಿಯೂ ಠೇವಣಿ ಇದೆ. ಆದರೆ, ಪ್ರಿಯಾಂಕ್‌ ಮಾತ್ರ ಶೇರು/ಬಾಂಡ್‌ಗಳಲ್ಲಿ

ಹೂಡಿಕೆ ಮಾಡಿದ್ದಾರೆ. ಇವರ ಳಿ ₹29.52 ಲಕ್ಷ ಮೌಲ್ಯದ ಹೊಂಡಾ ಸಿಆರ್‌ವಿ ಐಷಾರಾಮಿ ಕಾರು ಇದೆ.

ಒಂದೂವರೆ ಕೆ.ಜಿ. ಚಿನ್ನ, ಏಳು ಕೆ.ಜಿ. ಬೆಳ್ಳಿ ಇದೆ. ಚಿತ್ತಾಪುರ ತಾಲ್ಲೂಕು ಗುಂಡಗುರ್ತಿ ಗ್ರಾಮದಲ್ಲಿ ₹2.03 ಕೋಟಿ ಮೌಲ್ಯದ ಕೃಷಿ ಜಮೀನು ಹೊಂದಿದ್ದಾರೆ. ಬೆಂಗಳೂರಿನ ರಾಚೇನಹಳ್ಳಿಯಲ್ಲಿ 2,700 ಚದುರ ಅಡಿಯ ನಿವೇಶನ, ಬೆಂಗಳೂರಿನಲ್ಲಿ ವಾಣಿಜ್ಯ ಸಂಕೀರ್ಣವನ್ನು ಹೊಂದಿದ್ದಾರೆ. ಕಲಬುರ್ಗಿಯ ವಿಠಲನಗರದಲ್ಲಿಯೂ ಪಾಲುದಾರಿಕೆಯಲ್ಲಿ ವಾಣಿಜ್ಯ ಸಂಕೀರ್ಣವಿದೆ. ತಮ್ಮ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗಿಲ್ಲ ಎಂದು ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಆಸ್ತಿ ಇಲ್ಲ, ಚಿನ್ನವೇ ಎಲ್ಲ!

ಚಿಂಚೋಳಿ ಜೆಡಿಎಸ್‌ ಅಭ್ಯರ್ಥಿ ಸುಶೀಲಾಬಾಯಿ ಅವರು ಯಾವುದೇ ಸ್ಥಿರಾಸ್ಥಿ ಹೊಂದಿಲ್ಲ. ಅವರ ಬಳಿ ₹77.50 ಲಕ್ಷ ಮೌಲ್ಯದ 250 ತೊಲೆ ಚಿನ್ನ ಇದೆ. ಕೈಯಲ್ಲಿ ₹90 ಸಾವಿರ ನಗದು ಇದೆ ಎಂದು ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಕನ್ನೀಜ್‌ ಬಳಿ 3 ಕೆ.ಜಿ. ಚಿನ್ನ, ವಜ್ರ

ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕನ್ನೀಜ್‌ ಫಾತಿಮಾ ಅವರು 3 ಕೆ.ಜಿ. 150 ಗ್ರಾಂ ಚಿನ್ನ ಹೊಂದಿದ್ದಾರೆ. ಅವರ ಬಳಿ 350 ಕ್ಯಾರೆಟ್‌ ವಜ್ರ ಇದ್ದು, ಎರಡೂವರೆ ಕೆ.ಜಿ. ಬೆಳ್ಳಿ ಇದೆ. ಇವುಗಳ ಮೌಲ್ಯವೇ 1.82 ಕೋಟಿ.

ಇವರ ಹೆಸರಲ್ಲಿ ಕೃಷಿ ಜಮೀನು ಇಲ್ಲ. ಕಲಬುರ್ಗಿ ಮತ್ತು ಬೆಂಗಳೂರಿನಲ್ಲಿ ಮನೆ, ನಿವೇಶನ, ಕಲಬುರ್ಗಿಯಲ್ಲಿ ವಾಣಿಜ್ಯ ಮಳಿಗೆಗಳು, ಲಾಡ್ಜ್‌ ಇವೆ. ಪತಿ ದಿ.ಖಮರುಲ್‌ ಇಸ್ಲಾಂ ಅವರ ಹೆಸರಲ್ಲಿ ಕಲಬುರ್ಗಿಯಲ್ಲಿ ಲಾಡ್ಜ್‌, ಕಟ್ಟಡ, ಬೆಂಗಳೂರಿನಲ್ಲಿಯೂ ಸ್ಥಿರ ಆಸ್ತಿ ಇದೆ.

ಕನ್ನೀಜ್‌ ಅವರು 11 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದು, ಅವರ ಬಳಿ ₹5 ಲಕ್ಷ ನಗದು ಇದೆ. ₹10ಲಕ್ಷ ಜೀವ ವಿಮೆ ಮಾಡಿಸಿದ್ದಾರೆ. ಅವರ ಪತಿ ದಿ.ಖಮರುಲ್‌ ಇಸ್ಲಾಂ ಅವರು ₹15 ಲಕ್ಷ ಜೀವ ವಿಮೆ ಮಾಡಿಸಿದ್ದರು. ಒಂದು ಇನ್ನೋವಾ ಕಾರು ಇದೆ. ಖಮರುಲ್‌ ಅವರ ಹೆಸರಿನಲ್ಲಿ ₹11.17 ಲಕ್ಷದಷ್ಟು ಕಾರು ಸಾಲ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry