‘ದರ್ಶನ್‌ಗೆ ಬೆಂಬಲ ನೀಡಲಿ’

7
ಸಾಹಿತಿ ದೇವನೂರ ಮಹಾದೇವ ಮನವಿ

‘ದರ್ಶನ್‌ಗೆ ಬೆಂಬಲ ನೀಡಲಿ’

Published:
Updated:

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಸಂಸದ ಎಚ್‌.ಡಿ.ದೇವೇಗೌಡರು ನೈತಿಕ ಬೆಂಬಲ ನೀಡಲಿ ಎಂದು ಸಾಹಿತಿ ದೇವನೂರ ಮಹಾದೇವ ಮನವಿ ಮಾಡಿದರು.

ಇಲ್ಲಿನ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಮತ್ತು ಕಾಂಗ್ರೆಸ್‌ ಶುಕ್ರವಾರ ಆಯೋಜಿಸಿದ್ದ ದರ್ಶನ್‌ ಪುಟ್ಟಣ್ಣಯ್ಯ ಅವರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇವೇಗೌಡರು ರಾಜಕಾರಣದಲ್ಲಿ ಭೀಷ್ಮ ಇದ್ದಂತೆ. ಅವರು ಪ್ರಧಾನಿಯಾದಾಗ ನಾವೆಲ್ಲ ಬಹಿರಂಗವಾಗಿ ನೈತಿಕ ಬೆಂಬಲ ನೀಡಿದ್ದೆವು. ಇದು ಅವರಿಗೆ ಗೊತ್ತು. ಅಲ್ಲದೆ, ಕಾವೇರಿ ನೀರಿನ ಹೋರಾಟದಲ್ಲಿ ಅವರ ಪಕ್ಷಾತೀತ ನಡೆಯನ್ನು ಮೆಚ್ಚಿ ಮಾಧ್ಯಮದಲ್ಲಿ ಲೇಖನ ಬರೆದಿದ್ದೆ. ಮೇಲುಕೋಟೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದೆ. ದೇವೇಗೌಡರು ನಮ್ಮ ಎದುರು ಪಕ್ಷದ

ವರಾಗಿರಬಹುದು. ರಾಜಕೀಯ ಭಿನ್ನಾಭಿಪ್ರಾಯ ಇರುವುದು ಸರ್ವೇಸಾಮಾನ್ಯ. ಆದರೆ, ಇಂತಹ ಸಂದರ್ಭದಲ್ಲಿ ದೇವೇಗೌಡರ ಆಶೀರ್ವಾದ ದರ್ಶನ್‌ ಪುಟ್ಟಣ್ಣಯ್ಯ ಮೇಲಿರಲಿ’ ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry