ಕುಟುಂಬ ರಾಜಕಾರಣ ಅಂತ್ಯಗೊಳಿಸಿ

7
ಕಾಂಗ್ರೆಸ್‌ ಅಭ್ಯರ್ಥಿ ರಾಜು ಎಂ.ತಲ್ಲೂರು

ಕುಟುಂಬ ರಾಜಕಾರಣ ಅಂತ್ಯಗೊಳಿಸಿ

Published:
Updated:

ಸೊರಬ: ತಾಲ್ಲೂಕಿನ ಅಭಿವೃದ್ಧಿಗೆ 50 ವರ್ಷಗಳಿಂದ ಮಣ್ಣೆರಚಿದ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಲು ಕಾಂಗ್ರೆಸ್‌ಗೆ  ಮತ ನೀಡಬೇಕು ಎಂದು ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜು ಎಂ. ತಲ್ಲೂರು ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಗೆ ಸಾವಿರಾರು ಕಾರ್ಯಕರ್ತರ ಒಡಗೂಡಿ ಮೆರವಣಿಗೆಯ ಮೂಲಕ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸುವುದರಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬುದನ್ನು ಜನರು ಅರಿತು ಬರುವ ಚುನಾವಣೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಎಲ್ಲಾ ವರ್ಗದವರಿಗೂ ಸಮಾನತೆ ಆಶಯದಲ್ಲಿ ಸವಲತ್ತುಗಳನ್ನು ನೀಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಇನ್ನಿತರೆ ಯೋಜನೆಗಳು ಸಾಮಾನ್ಯ ಜನರಿಗೆ ಜೀವನ ಕಲ್ಪಿಸಿವೆ ಎಂದರು. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಕೊಡುವ ಮಹತ್ವದ ಕಾರ್ಯಕ್ಕೆ ಕಾಗೋಡು ತಿಮ್ಮಪ್ಪ ಅವರು ಹೋರಾಟ ಅವಿಸ್ಮರಣೀಯ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಕೊಡುಗೆಯನ್ನು ತಮ್ಮದೇ ಎಂದು ಬಿಂಬಿಸಿಕೊಂಡು ಸಾಮಾನ್ಯ ಜನರಿಂದ ಹಣ ಲೂಟಿ ಮಾಡಿದ ಮಧು ಬಂಗಾರಪ್ಪ ಅವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಲೇವಡಿ ಮಾಡಿದರು.

ತಾಲ್ಲೂಕಿನ ಶಾಶ್ವತ ನಿರಾವರಿ ಸೇರಿದಂತೆ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದು ನನಸು ಮಾಡಲು ತಾಲ್ಲೂಕಿನ ಜನ ನನ್ನನ್ನ ಗೆಲ್ಲಿಸಬೇಕು ಎಂದು ,ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಗಜಾನನ, ಯೋಗೇಶ್ವರಿ ವಿಜಯ್, ಸರೋಜಾ ಗುರುರಾಜ್, ಅಣ್ಣಪ್ಪ, ಲಕ್ಷ್ಮಿಕಾಂತ್ ಚಿಮನೂರು, ರುದ್ರಗೌಡ, ಈರಪ್ಪ ನೇರಲಗಿ, ಕೆರಿಯಪ್ಪ, ಲಿಂಗರಾಜ್ ಹರೂರು, ಮಂಜುಳಾ, ಭಾರತಿ, ಮಂಜಪ್ಪ,ಶೋಭಾ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry