ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

7

ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

Published:
Updated:
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಭದ್ರಾವತಿ: ಹೊರಗೆ ಬಿಸಿಲ ಧಗೆ, ಒಳಗೆ ಮಕ್ಕಳ ಕಲರವ ಇವೆರಡರ ನಡುವೆ ಪ್ರತಿಭೆಗಳ ಹುಡು‌ಕಾಟದ ಪ್ರಯತ್ನದ ವಿನೂತನ ಪ್ರಯೋಗ ನಡೆದಿದ್ದು ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ. ಲಯನ್ಸ್ ಸಂಸ್ಥೆ ಆಯೋಜನೆ ಮಾಡಿರುವ ಮಕ್ಕಳ ರಜಾ–ಮಜಾ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿರುವ ಚಿಣ್ಣರಿಗೆ ಹಾಡು, ಕುಣಿತ, ಅಭಿನಯ, ಚಿತ್ತಾರದ ನಡುವಿನ ಸೊಬಗಿನ ಕಲೆ ಕಲಿಸುವಲ್ಲಿ ತರಬೇತುದಾರ ಅಪರಂಜಿ ಶಿವರಾಜ್ ಮುತುವರ್ಜಿ ವಹಿಸಿದ್ದಾರೆ.

ಈ ಎಲ್ಲಾ ಚಟುವಟಿಕೆಗಳ ನಡುವೆ ಇನ್ನಿತರೆ ವೈಯಕ್ತಿಕ ಬೆಳವಣಿಗೆಗೆ ಪೂರಕವಾದ ಸಾಮಾನ್ಯ ಜ್ಞಾನದ ಬೆಳವಣಿಗೆ, ಪ್ರಶ್ನೋತ್ತರ, ಜ್ಞಾಪಕ ಶಕ್ತಿ ಪರೀಕ್ಷೆಯ ವಿವಿಧ ವಿನೋದಾವಳಿ ನಡೆಯಿತು. ಶಿಬಿರದಲ್ಲಿ ಕೆ. ಅನಂತಕೃಷ್ಣನಾಯಕ್, ನಿತ್ಯಾನಂದ ಪೈ, ತಮ್ಮೇಗೌಡ, ಉಷಾ ಎ. ನಾಯಕ್, ನಾರಾಯಣಮೂರ್ತಿ ಅವರೂ ಹಾಜರಿದ್ದು ಶಿಬಿರದ ಚಟುವಟಿಕೆ ನಡೆಸುವಲ್ಲಿ ನೆರವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry