ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಜನರಿಗೆ ನೋವಿಗೆ ಸ್ಪಂದಿಸಬೇಕು : ಸಲಿಂ ಬರ್ಕಾತ್

Last Updated 22 ಆಗಸ್ಟ್ 2018, 12:07 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು ದೇವರನ್ನು ಪ್ರಾರ್ಥಿಸಿದಂತೆ ಎಂದು ಜಾಮಿಯಾ ಮಸೀದಿ ಹಜರತ್ ಸಲಿಂ ಬರ್ಕಾತ್ ತಿಳಿಸಿದರು.

ಬಕ್ರೀದ್ ಹಬ್ಬದ ಪ್ರಯುಕ್ತ ಇಲ್ಲಿನ ಜಾಮಿಯ ಮಸೀದಿಯಲ್ಲಿ ಬುಧವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಮಾತನಾಡಿದರು.

‘ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಬೇಕು. ಇಂದಿನ ಪ್ರಕೃತಿ ವಿಕೋಪಗಳಿಗೆ ಮಾನವನೇ ಹೊಣೆ. ಸಂತ್ರಸ್ತರಿಗೆ ಪರಿಹಾರ ನೀಡುವ ಮೂಲಕ ಸ್ಪಂದಿಸಬೇಕು’ ಎಂದು ಹೇಳಿದರು.

ಮುತುವಲ್ಲಿ ಏಜಾಜ್ ಅಹಮದ್, ಕಾರ್ಯದರ್ಶಿ ಮಿರ್ಜಾ ಇಸ್ಮಾಯಿಲ್, ಜಿಲ್ಲಾ ವಕ್ಪ್‌ ಬೋರ್ಡ್ ಉಪಾಧ್ಯಕ್ಷ ಕೆ. ಸಿರಾಜ ಅಹಮದ್, ತಜಮುಲ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT