ನಾನು ಸ್ಪರ್ಧಿಸುವುದಿಲ್ಲ: ರಮ್ಯಾ

7

ನಾನು ಸ್ಪರ್ಧಿಸುವುದಿಲ್ಲ: ರಮ್ಯಾ

Published:
Updated:
ನಾನು ಸ್ಪರ್ಧಿಸುವುದಿಲ್ಲ: ರಮ್ಯಾ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೂ, ಸ್ಪರ್ಧಿಸುವ ಕುರಿತು ಶಾಸಕ ಅಂಬರೀಷ್‌ ಅವರು ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ.

ಈ ಬೆಳವಣಿಗೆಯ ಬೆನ್ನಲ್ಲೇ ಮಂಡ್ಯದಿಂದ ಅಂಬರೀಷ್‌ ಅವರ ಬದಲಿಗೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಸ್ಪರ್ಧಿಸಲಿದ್ದಾರಾ? ಎಂಬ ಪ್ರಶ್ನೆಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ರಮ್ಯಾ ‘ಇಲ್ಲ, ನಾನು ಸ್ಪರ್ಧಿಸುತ್ತಿಲ್ಲ’ ಎಂದು ಹೇಳಿ ಟ್ವೀಟ್‌ ಮಾಡಿದ್ದಾರೆ.

ಜತೆಗೆ, ಅಂಬರೀಷ್‌ ಬದಲಿಗೆ ರಮ್ಯಾ ಸ್ಪರ್ಧಿಸಲಿದ್ದಾರಾ ಎಂದು ಪ್ರಶ್ನಿಸಿರುವ ಟ್ವೀಟ್‌ವೊಂದನ್ನು ರಮ್ಯಾ ರೀ ಟ್ವೀಟ್‌ ಮಾಡಿ, ಈ ಹೇಳಿಕೆ ನೀಡಿದ್ದಾರೆ.

ಶಾಸಕ ಅಂಬರೀಷ್‌ಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿ ಐದು ದಿನ ಕಳೆದರೂ ಅವರು ಮಂಡ್ಯ ಕ್ಷೇತ್ರಕ್ಕೆ ಬಂದು ನಾಮಪತ್ರ ಸಲ್ಲಿಸುವ, ಪ್ರಚಾರ ಆರಂಭಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಕಾಂಗ್ರೆಸ್‌ ಮುಖಂಡರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry