4

‘ಜೈಲು ಹಕ್ಕಿಗಳ’ ಹೊರತಾಗಿ ನಿಷ್ಠರಿಗೆ ರಾಜಕೀಯ ‘ಸನ್ಯಾಸ’ಕ್ಕೆ ಬಿಜೆಪಿ ಒತ್ತಡ: ಸಿದ್ದರಾಮಯ್ಯ

Published:
Updated:
‘ಜೈಲು ಹಕ್ಕಿಗಳ’ ಹೊರತಾಗಿ ನಿಷ್ಠರಿಗೆ ರಾಜಕೀಯ ‘ಸನ್ಯಾಸ’ಕ್ಕೆ ಬಿಜೆಪಿ ಒತ್ತಡ: ಸಿದ್ದರಾಮಯ್ಯ

ಬೆಂಗಳೂರು: 'ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ರಾಜಕೀಯ ‘ಸನ್ಯಾಸ’ ಸ್ವೀಕರಿಸಿದ್ದಾರೆ. ಅವರಿಗೆ ಆರೋಗ್ಯ ನೆಮ್ಮದಿ ಲಭಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಯಶವಂತ ಸಿನ್ಹಾ ಅವರ ನಿವೃತ್ತಿ ಘೋಷಣೆಯಿಂದ ಸಿಕ್ಕ ಅವಕಾಶ ಬಳಸಿಕೊಂಡಿರುವ ಸಿದ್ದರಾಮಯ್ಯ ಅವರು ಈ ಕುರಿತು ಪ್ರತಿಕ್ರಿಯಿಸಿ, ‘ಎಲ್ಲಾ ಅರ್ಹತೆ ಹೊಂದಿರುವ ಮಾಜಿ ‘ಜೈಲು ಹಕ್ಕಿಗಳ’ ಹೊರತುಪಡಿಸಿ, 75ಕ್ಕೂ ಹೆಚ್ಚು ಪ್ರಾಮಾಣಿಕ ಹಿರಿಯ ನಾಯಕರಿಗೆ ‘ಸನ್ಯಾಸ’ ತೆಗೆದುಕೊಳ್ಳಲು ಬಿಜೆಪಿಯಲ್ಲಿ ಒತ್ತಡ ಹಾಕುತ್ತಿದ್ದಾರೆ’ ಎಂದು #JailBirds ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಬಿಜೆಪಿ ತೊರೆದಿದ್ದಾರೆ. ಪಟನಾದಲ್ಲಿ ಶನಿವಾರ ಮಾತನಾಡಿದ ಅವರು ರಾಜಕೀಯ ನಿವೃತ್ತಿ ಸ್ವೀಕರಿಸುವುದಾಗಿ ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2016ರಲ್ಲಿ ₹500 ಮತ್ತು ₹1000 ಮುಖಬೆಲೆಯ ನೋಟು ರದ್ದು ಮಾಡಿದಾಗ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು.

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದನಿಯೆತ್ತುವ ಉದ್ದೇಶದಿಂದ ‘ರಾಷ್ಟ್ರ ಮಂಚ್’ ಎಂಬ ವಿಚಾರ ವೇದಿಕೆಯನ್ನು ಸಿನ್ಹಾ ಜನವರಿಯಲ್ಲಿ ಆರಂಭಿಸಿದ್ದರು.

* ಇವನ್ನೂ ಓದಿ...

ಬಿಜೆಪಿಗೆ ಯಶವಂತ ಸಿನ್ಹಾ ಗುಡ್ ಬೈ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry