₹100 ಕೋಟಿ ವ್ಯಾಪಾರ ಬಿಟ್ಟು ಸನ್ಯಾಸ ಸ್ವೀಕರಿಸಿದ 24 ವರ್ಷದ ಚಾರ್ಟೆಡ್‌ ಅಕೌಂಟೆಂಟ್‌

7

₹100 ಕೋಟಿ ವ್ಯಾಪಾರ ಬಿಟ್ಟು ಸನ್ಯಾಸ ಸ್ವೀಕರಿಸಿದ 24 ವರ್ಷದ ಚಾರ್ಟೆಡ್‌ ಅಕೌಂಟೆಂಟ್‌

Published:
Updated:
₹100 ಕೋಟಿ ವ್ಯಾಪಾರ ಬಿಟ್ಟು ಸನ್ಯಾಸ ಸ್ವೀಕರಿಸಿದ 24 ವರ್ಷದ ಚಾರ್ಟೆಡ್‌ ಅಕೌಂಟೆಂಟ್‌

ಅಹಮದಾಬಾದ್‌: ಆರ್ಥಿಕವಾಗಿ ಸಬಲರಾದ ಜೈನಮತದ ಕುಟುಂಬಕ್ಕೆ ಸೇರಿದ 24 ವರ್ಷದ ಯುವಕನೊಬ್ಬ ತನ್ನ ವೃತ್ತಿ ಮತ್ತು ಕುಟುಂಬದ ₹100 ಕೋಟಿ ವ್ಯಾಪಾರವನ್ನು ತ್ಯಜಿಸಿ ಜೈನ ಮುನಿಯಾಗುವ ದಾರಿ ತುಳಿದಿದ್ದಾನೆ.

ಮೋಕ್ಷೇಶ್‌ ಸೇಠ್‌ ಕಳೆದ ಎರಡು ವರ್ಷದಿಂದ ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕುಟುಂಬದ ವ್ಯಾಪಾರವನ್ನು ನಿರ್ವಹಿಸುತ್ತಿದ್ದ. ಇಲ್ಲಿನ ಗಾಂಧಿನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತನ್ನದೆಲ್ಲವನ್ನು ಬಿಟ್ಟು ಮೋಕ್ಷೇಶ್‌ ಸನ್ಯಾಸ ಸ್ವೀಕರಿಸಿದ್ದಾರೆ.

ಜೈನಮುನಿಯಾಗುವ ಈ ದೀಕ್ಷೆ ಸ್ವೀಕರಿಸಿದವರು ಸಂಬಂಧಿಕರು, ಐಷಾರಾಮಿ ವಸ್ತುಗಳು ಮತ್ತು ಸ್ಥಳಗಳೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಕಳಚಿಟ್ಟು ಸರಳ ಜೀವನ ಸಾಗಿಸಬೇಕಿದೆ.

‘ಮುಂಬೈನ ಉದ್ಯಮಿ ಸಂದೀಪ್‌ ಸೇಠ್‌ರ ಹಿರಿಮಗನಾದ ಮೋಕ್ಷೇಶ್‌ ಈ ಶನಿವಾರದಿಂದ ಕರುಣಾಪ್ರೇಮ್‌ ವಿಜಯಾಜೀ ನಾಮದಿಂದ ಗುರುತಿಸಲ್ಪಡುತ್ತಾರೆ’ ಎಂದು ದೀಕ್ಷೆ ಪಡೆದ ಯುವಕನ ಚಿಕ್ಕಪ್ಪ ಗಿರೀಶ್‌ ಸೇಠ್‌ ತಿಳಿಸಿದ್ದಾರೆ.

ಮೋಕ್ಷೇಶ್‌ ಕುಟುಂಬದವರು ಗುಜರಾತ್‌ನ ಬನಸ್ಕಾಂಥ ಜಿಲ್ಲೆಯ ದೀಸಾ ಪಟ್ಟಣದವರು. ಅವರು ಮುಂಬೈನಲ್ಲಿ ₹100 ಕೋಟಿ ವಹಿವಾಟು ಇರುವ ಅಲ್ಯೂಮಿನಿಯಮ್‌ ಪರಿಕರಗಳ ವ್ಯಾಪಾರ ನಡೆಸುತ್ತಿದ್ದಾರೆ. ಯುವಕ ತನ್ನ ಮೊದಲ ಪ್ರಯತ್ನದಲ್ಲಿಯೇ ಸಿ.ಎ ಪರೀಕ್ಷೆ ಪಾಸು ಮಾಡಿ, ಕುಟುಂಬದ ವ್ಯಾಪಾರವನ್ನು ಎರಡು ವರ್ಷದಿಂದ ನೋಡಿಕೊಳ್ಳುತ್ತಿದ್ದ.

ಸೂರತ್‌ನಲ್ಲಿ ನೆಲೆಸಿರುವ ಲಕ್ಷಾಧೀಶ ವಜ್ರದ ವ್ಯಾಪಾರಿಯೊಬ್ಬರ ಮಗಳಾದ 12 ವರ್ಷದ ಭವ್ಯಾ ಶಾ ಎಂಬ ಬಾಲಕಿ ಶುಕ್ರವಾರ(ನಿನ್ನೆ) ಜೈನದೀಕ್ಷೆ ಸ್ವೀಕರಿಸಿದ್ದಾಳೆ. ‘ದೇವರು ತೋರಿಸಿದ ಸತ್ಯದ ದಾರಿಯನ್ನು ಆಯ್ದುಕೊಳ್ಳುವುದಕ್ಕೆ ನನಗೆ ಸಂತೋಷವಾಗುತ್ತಿದೆ’ ಎಂದು ಭವ್ಯಾ ದೀಕ್ಷೆ ಸಂದರ್ಭದಲ್ಲಿ ಹೇಳಿದ್ದಳು.

******************************************************************

24-Year-Old Accountant Gives Up Over 100 Crore Business To Become A Monk

AHMEDABAD:  A 24-year-old chartered accountant belonging to an affluent Jain family has embraced monkhood today. In the process, he has given up on his career and a family business worth over Rs. 100 crores.

Mokshesh Sheth managed his family business for two years after becoming a chartered accountant (CA). In a ceremony held in Gandhinagar today, he gave it all up and became a Jain monk. Life after accepting monkhood for Mokshesh Sheth would mean that he would be unable to enjoy luxury of a householder and has to be detached emotionally from other people, places or things.

From today onwards, the eldest son of Mumbai-based businessman Sandip Sheth, will be known as 'Karunapremvijay Jee', said his uncle Girish Sheth.

Mokshesh's family originally belongs to Deesa town of Banaskantha district in Gujarat and is now settled in Mumbai. The family is into aluminium business and Mokshesh handled the operations after becoming a chartered accountant in his first attempt.

Yesterday, 12-year-old Bhavya Shah from Surat, son of a millionaire diamond merchant also embraced monkhood. "I am happy to take the path of truth shown by God," Bhavya Shah said.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry