‘ಅಧಿಕಾರದಲ್ಲಿ ಇದ್ದಾಗ ನಾನು ಅಹಿಂದು’

7

‘ಅಧಿಕಾರದಲ್ಲಿ ಇದ್ದಾಗ ನಾನು ಅಹಿಂದು’

Published:
Updated:

ಅಧಿಕಾರದಲ್ಲಿ ಇದ್ದಾಗ ನಾನು ಅಹಿಂದು, ಜ್ಯೋತಿಷ, ಮೂಢನಂಬಿಕೆ ನಂಬೋದಿಲ್ಲ... ಚುನಾವಣೆ ಹತ್ತಿರ ಇದ್ದಾಗ ಜ್ಯೋತಿಷ ಮೂಢನಂಬಿಕೆ ಎಂದವರೇ ಈಗ ಜ್ಯೋತಿಷ ನಂಬುತ್ತಾರೆ ಎಂದರೆ ಹಿಂದೂ ಧರ್ಮದ ಮೇಲೆ ನಂಬಿಕೆ ಇದೆ ಎಂದಾಯಿತು...

ಪೂರ್ವಿ ರಾಜು ಅರಸ್‌ (ಪೂರ್ವಿ)‏ @purviraju1 ಜೆಡಿಎಸ್ ಈಗ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆಗಿದೆ. ಮೈಸೂರಿನಲ್ಲಿ ಬಿಜೆಪಿ ಜೊತೆಗಿದೆ. ಬಿಎಸ್‌ಪಿ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಂಡಿದೆ ಹಾಗೂ ಒವೈಸಿ, ಕೆಸಿಅರ್, ಪವನ್ ಕಲ್ಯಾಣ್‌ರ ಬೆಂಬಲವನ್ನೂ ಪಡೆದಿದ್ದಾರೆ. ಅಧಿಕಾರಕ್ಕಾಗಿ ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳುಳ್ಳ ಪಕ್ಷಗಳ ನೆರವು ಪಡೆಯುವುದೇ ಇವರ ಅದ್ಭುತ ಜಾತ್ಯತೀತವಾದ.

ಸುದರ್ಶನ್‌ ಜಯರಾಮು, @sudhisjayaramu

ಸಿದ್ದುಗೆ ಬಾದಾಮಿಯಲ್ಲಿ ಜನ ಪೈಜಾಮ ಹಾಕ್ಸಿ ಗೆಲ್ಲಿಸ್ತಾರಾ? ಇಲ್ಲ ಗೋದಾಮು ಸೇರಿಸ್ತಾರಾ?

ರಜನಿಕಾಂತ್‌ ಯಾದವಾಡೆ, @Rajanik74218200

ಒಂದು ಸಿದ್ಧಾಂತದಿಂದ ಮತ್ತೊಂದು ಸಿದ್ಧಾಂತಕ್ಕೆ, ಪಕ್ಷದಿಂದ ಪಕ್ಷಕ್ಕೆ, ಕ್ಷೇತ್ರವನ್ನು ಬದಲಿಸುವ ಸಿದ್ದರಾಮಯ್ಯ ವಲಸೆ ಹಕ್ಕಿ ಆಗಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಜನರ ವಿಶ್ವಾಸ ಮತ್ತು ಆತ್ಮವಿಶ್ವಾಸ ಕಳೆದುಕೊಂಡಿರುವ ಸಿದ್ದರಾಮಯ್ಯ ಎರಡನೇ ಕ್ಷೇತ್ರ ಆರಿಸಿಕೊಂಡಿದ್ದಾರೆ.

ಅನಂತ್‌ ಕುಮಾರ್‌, @AnanthKumar_BJP

ಯಶವಂತ ಸಿನ್ಹಾ ಅವರು ರಾಜಕೀಯ ‘ಸನ್ಯಾಸ’ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ. ಅವರ ಆರೋಗ್ಯ ಉತ್ತಮವಾಗಿರಲಿ ಮತ್ತು ಆಶಯಗಳು ನೆರವೇರಲಿ. ಬಿಜೆಪಿಯಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಪ್ರಾಮಾಣಿಕ ಮುಖಂಡರನ್ನು ಬಲವಂತವಾಗಿ ರಾಜಕೀಯ ‘ಸನ್ಯಾಸ’ ಸ್ವೀಕರಿಸುವಂತೆ ಮಾಡಲಾಗುತ್ತಿದೆ. ಆದರೆ, ‘ಸನ್ಯಾಸ’ ಸ್ವೀಕರಿಸಲು ನಿಜಕ್ಕೂ ಅರ್ಹರಾಗಿರುವ ಜೈಲುಹಕ್ಕಿಗಳನ್ನು ಉಳಿಸಿಕೊಳ್ಳಲಾಗುತ್ತಿದೆ.

ಸಿದ್ದರಾಮಯ್ಯ, @siddaramaiah

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry