ಮುಂಬೈ ಇಂಡಿಯನ್ಸ್‌ಗೆ ಜಯದ ಹಂಬಲ

7

ಮುಂಬೈ ಇಂಡಿಯನ್ಸ್‌ಗೆ ಜಯದ ಹಂಬಲ

Published:
Updated:
ಮುಂಬೈ ಇಂಡಿಯನ್ಸ್‌ಗೆ ಜಯದ ಹಂಬಲ

ಜೈಪುರ: ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ ಟೂರ್ನಿಯ 11ನೇ ಆವೃತ್ತಿಯಲ್ಲಿ ಎರಡನೇ ಜಯದತ್ತ ಚಿತ್ತ ನೆಟ್ಟಿದೆ.

ಹಾಲಿ ಚಾಂಪಿಯನ್ ಮುಂಬೈ ತಂಡವು ಈ ಬಾರಿಯ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌’ ಸೋಲಿಗೆ ಶರಣಾಗಿತ್ತು. ಹಿಂದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮಣಿಸಿತ್ತು.

ಆರ್‌ಸಿಬಿ ವಿರುದ್ಧ ಅಬ್ಬರಿಸಿದ್ದ ರೋಹಿತ್, ವೆಸ್ಟ್‌ ಇಂಡೀಸ್‌ನ ಎವಿನ್‌ ಲೂಯಿಸ್‌, ಹಾರ್ದಿಕ್‌ ಮತ್ತು ಕೃಣಾಲ್‌ ಪಾಂಡ್ಯ ಅವರು ರಾಯಲ್ಸ್‌ ಬೌಲರ್‌ಗಳನ್ನೂ ದಂಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಕೀರನ್‌ ಪೊಲಾರ್ಡ್‌ ಗಾಯದಿಂದ ಗುಣಮುಖರಾಗಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ, ಮಿಷೆಲ್‌ ಮೆಕ್‌ಲೆನಾಗನ್‌, ಹಾರ್ದಿಕ್‌, ಮುಸ್ತಫಿಜರ್‌ ರೆಹಮಾನ್‌, ಕೃಣಾಲ್‌ ಮತ್ತು ಮಯಂಕ್ ಮಾರ್ಕಂಡೆ ಅವರು ತಂಡದ ಆಧಾರಸ್ತಂಭಗಳಾಗಿದ್ದಾರೆ.

ಅಜಿಂಕ್ಯ ರಹಾನೆ ಸಾರಥ್ಯದ ರಾಯಲ್ಸ್‌ ಕೂಡ ಜಯದ ಮಂತ್ರ ಜಪಿಸುತ್ತಿದೆ. ಈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ರೋಹಿತ್‌ ಪಡೆಯನ್ನು ಕಟ್ಟಿಹಾಕುವ ಆಲೋಚನೆ ಹೊಂದಿದೆ.

ಆರಂಭ: ರಾತ್ರಿ 8.
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry