ರ‍್ಯಾಲಿ: ಸಂತೋಷ್‌ಗೆ 19ನೇ ಸ್ಥಾನ

7

ರ‍್ಯಾಲಿ: ಸಂತೋಷ್‌ಗೆ 19ನೇ ಸ್ಥಾನ

Published:
Updated:
ರ‍್ಯಾಲಿ: ಸಂತೋಷ್‌ಗೆ 19ನೇ ಸ್ಥಾನ

ಮೆರ್ಜೊಗಾ, ಮೊರಾಕ್ಕೊ: ಕರ್ನಾಟಕದ ಮೋಟರ್‌ ಬೈಕ್‌ ಸಾಹಸಿ ಸಿ.ಎಸ್‌.ಸಂತೋಷ್‌ ಅವರು ಮೆರ್ಜೊಗಾ ರ‍್ಯಾಲಿಯಲ್ಲಿ 19ನೇ ಸ್ಥಾನ ಗಳಿಸಿದ್ದಾರೆ.

ಹೀರೊ ಮೋಟರ್‌ಸ್ಪೋರ್ಟ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸಂತೋಷ್‌ ಒಟ್ಟಾರೆ 16 ಗಂಟೆ 43 ನಿಮಿಷ 19 ಸೆಕೆಂಡುಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು.

ಶುಕ್ರವಾರ ನಡೆದಿದ್ದ ಅಂತಿಮ ಹಂತದ ಸ್ಪರ್ಧೆಯನ್ನು ಸಂತೋಷ್‌ 30ನೇಯವರಾಗಿ ಪೂರೈಸಿದ್ದರು. 40 ಕಿಲೊ ಮೀಟರ್ಸ್‌ ದೂರವನ್ನು 44 ನಿಮಿಷ 57 ಸೆಕೆಂಡುಗಳಲ್ಲಿ ಕ್ರಮಿಸಿದ್ದರು.

ಹೀರೊ ತಂಡದ ಮತ್ತೊಬ್ಬ ಸ್ಪರ್ಧಿ ಒರಿಯಲ್‌ ಮೆನಾ ಒಟ್ಟಾರೆ 15ನೇ ಸ್ಥಾನ ತಮ್ಮದಾಗಿಸಿಕೊಂಡರು. ಹೊಂಡಾ ರೇಸಿಂಗ್‌ ತಂಡದ ಜೊವಾನ್‌ ಬರೆಡಾ ಬೊರ್ಟ್‌ ಪ್ರಶಸ್ತಿ ಜಯಿಸಿದರು. ಅವರು ಒಟ್ಟಾರೆ 13 ಗಂಟೆ 28 ನಿಮಿಷ 19 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry