ರಾಮದಾಸ್‌ಗೆ ಟಿಕೆಟ್‌: ಕೃಷ್ಣರಾಜ ಕ್ಷೇತ್ರದಲ್ಲಿ ಭಿನ್ನಮತ

7

ರಾಮದಾಸ್‌ಗೆ ಟಿಕೆಟ್‌: ಕೃಷ್ಣರಾಜ ಕ್ಷೇತ್ರದಲ್ಲಿ ಭಿನ್ನಮತ

Published:
Updated:

ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾದ ಬೆನ್ನಲೇ ಭಿನ್ನಮತ ಭುಗಿಲೆದ್ದಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಚ್‌.ವಿ. ರಾಜೀವ್‌ ಅವರನ್ನು ಒತ್ತಾಯಿಸಿದ್ದಾರೆ. ಶನಿವಾರ ಆಯೋಜಿಸಿದ್ದ ರಾಜೀವ್‌ ಬೆಂಬಲಿಗರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

‘ಟಿಕೆಟ್‌ ಕೈತಪ್ಪಿದ್ದರಿಂದ ಬೇಸರವಾಗಿರುವುದು ನಿಜ. 24 ಗಂಟೆ ಸಮಯಾವಕಾಶ ಕೊಡಿ. ನನ್ನ ಮುಂದಿನ ನಿಲುವು ತಿಳಿಸುತ್ತೇನೆ’ ಎಂದು ರಾಜೀವ್‌ ಹೇಳಿದರು. ಭಿನ್ನಮತ ಶಮನಗೊಳಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry