ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

7

ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

Published:
Updated:
ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

ಮಂಗಳೂರು: ‘ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳಕ್ಕೆ ಸ್ಥಳೀಯ ಕಾರಣಗಳಿಲ್ಲ. ಅಂತರರಾಷ್ಟ್ರೀಯ ಮಟ್ಟದ ಕಾರಣಗಳಿಂದ ದರ ಏರಿಕೆಯಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳಕ್ಕೆ ನಾಲ್ಕು ಮುಖ್ಯ ಕಾರಣಗಳಿವೆ. ಎಲ್ಲವೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳೇ ಆಗಿವೆ’ ಎಂದರು.

‘ವೆನಿಜುವೆಲಾದಲ್ಲಿ ಆರ್ಥಿಕ ಕುಸಿತ ಮತ್ತು ರಾಜಕೀಯ ಅಸ್ಥಿರತೆಯಿಂದ ಕಚ್ಚಾ ತೈಲದ ಉತ್ಪಾದನೆ ಶೇ 30ರಷ್ಟಕ್ಕೆ ಕುಸಿದಿದೆ. ಸಿರಿಯಾ ಮೇಲಿನ ದಾಳಿಯಿಂದ ಅಲ್ಲಿಯೂ ಉತ್ಪಾದನೆ ಆಗುತ್ತಿಲ್ಲ. ಇರಾಕ್‌ ಜೊತೆ ವಹಿವಾಟು ನಡೆಸಲು ಅಮೆರಿಕ ವಿಧಿಸಿರುವ ನಿರ್ಬಂಧ ಅಡ್ಡಿಯಾಗಿದೆ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ (ಒಪೆಕ್‌) ಕೂಡ ಉತ್ಪಾದನಾ ಪ್ರಮಾಣ ತಗ್ಗಿಸಿದೆ. ಈ ಕಾರಣಗಳಿಂದ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry