ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

7
ಏ.21ರಿಂದಲೇ ಜಾರಿ: ಉತ್ತರ ಕೊರಿಯಾ ನಿರ್ಧಾರ

ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

Published:
Updated:
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

ಬೀಜಿಂಗ್: ಪರಮಾಣು ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಶನಿವಾರದಿಂದ (ಏಪ್ರಿಲ್ 21) ಸ್ಥಗಿತಗೊಳಿಸುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಘೋಷಿಸಿದ್ದಾರೆ.

ಶುಕ್ರವಾರ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಕಿಮ್ ಅವರು ಅಣ್ವಸ್ತ್ರ ನಿಶಸ್ತ್ರೀಕರಣ ನಿರ್ಧಾರ ಪ್ರಕಟಿಸಿದರು. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ–ಇನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗಿನ ಸಭೆಗೂ ಮುನ್ನ ಉತ್ತರ ಕೊರಿಯಾ ಈ ನಿಲುವನ್ನು ತಳೆದಿದೆ.

ಚೀನಾ ಸ್ವಾಗತ: ಕಿಮ್ ಅವರು ತಳೆದಿರುವ ಈ ನಿಲುವನ್ನು ಮಿತ್ರದೇಶ ಚೀನಾ ಶನಿವಾರ ಸ್ವಾಗತಿಸಿದೆ.

‘ಉತ್ತರ ಕೊರಿಯಾ ಕೈಗೊಂಡಿರುವ ನಿರ್ಧಾರದಿಂದ ಕೊರಿಯಾ ಪರ್ಯಾಯ ದ್ವೀಪದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಗೊಳ್ಳಲಿದೆ. ಜೊತೆಗೆ ಆ ಭಾಗದಲ್ಲಿ ರಾಜಕೀಯ ಸ್ಥಿರತೆಗೂ ಕಾರಣವಾಗಲಿದೆ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಕೊರಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಅಣ್ವಸ್ತ್ರ ಮುಕ್ತ ವಾತಾವರಣ ಹಾಗೂ ಶಾಂತಿಯನ್ನು ಅಲ್ಲಿನ ಜನರು ಬಯಸುತ್ತಿದ್ದಾರೆ. ಅಂತರರಾಷ್ಟ್ರೀಯ ಸಮುದಾಯದನಿರೀಕ್ಷೆಯೂ ಇದೇ ಆಗಿದೆ’ ಎಂದು ಕಾಂಗ್ ಹೇಳಿದ್ದಾರೆ. ಚೀನಾ ಈ ವಿಚಾರದಲ್ಲಿ ಸಕ್ರಿಯ ಪಾತ್ರ ವಹಿಸಲಿದೆ ಎಂದಿದ್ದಾರೆ.

ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೂ ಸ್ವಾಗತಿಸಿದ್ದಾರೆ.

ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿರುವ ಅವರು, ‘ಇದೊಂದು ಉತ್ತಮ ಸುದ್ದಿ. ಶೃಂಗಸಭೆಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry