₹ 66 ಲಕ್ಷ ಗೆದ್ದ ಭಾರತದ ಸಂಜಾತ

7

₹ 66 ಲಕ್ಷ ಗೆದ್ದ ಭಾರತದ ಸಂಜಾತ

Published:
Updated:
₹ 66 ಲಕ್ಷ ಗೆದ್ದ ಭಾರತದ ಸಂಜಾತ

ನ್ಯೂಯಾರ್ಕ್‌: ಪ್ರತಿಷ್ಠಿತ ‘ಜಿಯೊಪಾರ್ಡಿ ಕಾಲೇಜು ಚಾಂಪಿಯನ್‌ಶಿಪ್‌’ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾರತ ಸಂಜಾತ ಅಮೆರಿಕದಲ್ಲಿ ಓದುತ್ತಿರುವ ಧ್ರುವ್ ಗೌರ್‌ ವಿಜೇತರಾಗಿದ್ದಾರೆ.

ಐವಿ ಲೀಗ್‌ ಬ್ರೌನ್‌ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಧ್ರುವ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ₹ 66.21 (1ಲಕ್ಷ ಡಾಲರ್‌) ಲಕ್ಷ ಬಹುಮಾನ ಗೆದ್ದಿದ್ದಾರೆ. ಸ್ಕೊಲಾಸ್ಟಿಕ್‌ ಅಸೆಸ್ಮೆಂಟ್ ಟೆಸ್ಟ್(ಎಸ್‌ಎಟಿ) ಪರೀಕ್ಷೆಯಲ್ಲಿ ಇವರು 1,600 ಅಂಕಗಳನ್ನು ಪಡೆದಿದ್ದರು.

‘ಸ್ಪರ್ಧೆಯ ಪ್ರಾರಂಭದಿಂದ ಅಂತಿಮ ಹಂತದವರೆಗೂ ಏಕಾಗ್ರತೆ ಕಾಯ್ದುಕೊಂಡಿದ್ದೆ. ಇಲ್ಲಿ ಸ್ಪರ್ಧಿಸಿದವರೆಲ್ಲ ಪ್ರತಿಭಾವಂತರು. ಹಾಗಾಗಿ ಗೆಲುವು ಸುಲಭವಾಗಿರಲಿಲ್ಲ. ಬಂದ ಹಣವನ್ನು ಯಾವುದಕ್ಕಾಗಿ ಬಳಸಬೇಕು ಎಂಬುದನ್ನು ಇನ್ನು ಯೋಚಿಸಿಲ್ಲ’ ಎಂದಿದ್ದಾರೆ.

ಒಟ್ಟು ಹದಿನಾಲ್ಕು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry