‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

7

‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

Published:
Updated:
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

ಮೈಸೂರು: ಬಿಜೆಪಿ ಮತ್ತು ಆ ಪಕ್ಷದ ನಾಯಕರನ್ನು ಅರ್ಥಮಾಡಿಕೊಳ್ಳಲು ಸಂಶೋಧನೆ ಮಾಡಬೇಕಾಗಿಲ್ಲ. ಕಾಮನ್‌ ಸೆನ್ಸ್‌ ಇದ್ದರೆ ಸಾಕು ಎಂದು ಚಿತ್ರನಟ ಪ್ರಕಾಶ ರೈ ವ್ಯಂಗ್ಯವಾಡಿದರು.

‘ಜಸ್ಟ್‌ ಆಸ್ಕಿಂಗ್‌’ ಸಂವಾದದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿ ನಾಯಕರನ್ನು ಅರ್ಥ ಮಾಡಿಕೊಳ್ಳಲು ಸಂಶೋಧನೆಯ ಅಗತ್ಯವಿಲ್ಲ. ಒಬ್ಬ ಮನುಷ್ಯನಾಗಿ ಯೋಚಿಸಿದರೆ ಸಾಕು’ ಎಂದರು.

‘ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಎದುರಿಸಲು ಬಿಜೆಪಿ ತಯಾರಿಲ್ಲ. ಪ್ರಶ್ನಿಸುವ ಮನೋಭಾವ ಹೊಂದಿದವರ ಮೇಲೆ ಕಲ್ಲು ತೂರಿಸಿ ಬೆದರಿಸಲು ಪ್ರಯತ್ನಿಸುತ್ತಿದೆ. ಕಲಬುರ್ಗಿಯಲ್ಲಿ ಕಾರನ್ನು ಅಡ್ಡಹಾಕಿ ಗಲಾಟೆ ಮಾಡಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿ ಭದ್ರತೆಯನ್ನು ಪಡೆದುಕೊಂಡಿದ್ದೇನೆ’ ಎಂದು ಹೇಳಿದರು.

‘ಜಮ್ಮುವಿನ ಕಠುವಾದ 8 ವರ್ಷದ ಬಾಲಕಿ ಹಾಗೂ ಉತ್ತರಪ್ರದೇಶದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ವಿರೋಧಿಸಲು ಜಾತಿ, ಧರ್ಮ, ಪಕ್ಷವನ್ನು ನೋಡಬೇಕಾಗಿಲ್ಲ. ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರು ಮನುಷ್ಯರೇ ಅಲ್ಲ. ತಮ್ಮ ಪಕ್ಷದವರು ಎಂಬ ಕಾರಣಕ್ಕೆ ಆರೋಪಿಗಳನ್ನು ರಕ್ಷಿಸಲು ಬಿಜೆಪಿ ಮುಂದಾಗಿರುವುದು ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry