ಸಿಐಡಿ ಕಚೇರಿ ಎದುರು ಪ್ರತಿಭಟನೆ

7

ಸಿಐಡಿ ಕಚೇರಿ ಎದುರು ಪ್ರತಿಭಟನೆ

Published:
Updated:

ಬೆಂಗಳೂರು: ‘ಡ್ರಿಮ್ಸ್‌ ಜಿ.ಕೆ, ಟಿಜಿಎಸ್‌ ಹಾಗೂ ಗೃಹ ಕಲ್ಯಾಣ ರಿಯಲ್ ಎಸ್ಟೇಟ್ ಕಂಪನಿಗಳ ಹೆಸರಲ್ಲಿ ಸಾವಿ‌ರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ನಾಲ್ವರು ವಂಚಕರನ್ನು ಶೀಘ್ರವೇ ಬಂಧಿ ಸಬೇಕು’ ಎಂದು ಒತ್ತಾಯಿಸಿ ಹಣ ಕಳೆದುಕೊಂಡ ನೂರಾರು ಸಂತ್ರಸ್ತರು ಸಿಐಡಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಚೀನ್‌ ನಾಯ್ಕ್, ಮಂದಿಪ್‌ ಕೌರ್‌, ದಿಶಾ ಚೌಧರಿ ಮತ್ತು  ಮಜುಂದಾರ ಶತಪರ್ಣಿ ಅವರು ನಗರದಲ್ಲಿ ಓಡಾಡಿಕೊಂಡಿದ್ದು, ಕೂಡಲೇ ಅವರನ್ನು ಬಂಧಿಸಿ, ನ್ಯಾಯ ಒದಗಿಸ ಬೇಕು ಎಂದವರು ಆಗ್ರಹಿಸಿದರು.

‘ಮಂದಿಪ್ ಕೌರ್‌ ಮತ್ತು ಮಜುಂದಾರ್‌ ಹೆಸರಲ್ಲಿ ನೂರಾರು ಸಲ ವಾರಂಟ್‌ ಜಾರಿಯಾಗಿದೆ. ಆದರೂ, ಅವರ ಬಂಧನವಾಗಿಲ್ಲ. ಪ್ರಕರಣ ಬೆಳಕಿಗೆ ಬಂದು ಒಂದು ವರ್ಷ ಕಳೆದರೂ ತಪ್ಪಿತಸ್ಥರ ಬಂಧನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೂರು ಕಂಪನಿಗಳ ಹೆಸರಿನಲ್ಲಿ ಒಟ್ಟು ₹1,110 ಕೋಟಿ ವಂಚನೆ ನಡೆದಿದೆ. ಈ ಪೈಕಿ ₹186 ಕೋಟಿಯಷ್ಟು ಆಸ್ತಿಯನ್ನು ಸಿಐಡಿ ಜಪ್ತಿ ಮಾಡಿದೆ. ಉಳಿದ ₹924 ಕೋಟಿಯ ಆಸ್ತಿ ಬಗ್ಗೆ ಸಿಐಡಿ ನೀಡಿರುವ ಕಾರಣಗಳು ನಮಗೆ ತೃಪ್ತಿಕರವಾಗಿಲ್ಲ’ ಎಂದು ದೂರಿದರು.

‘ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿ ಅವರಿಗೆ ಸೈಟ್‌ ಮತ್ತು ಫ್ಲ್ಯಾಟ್‌ಗಳನ್ನು ವಿತರಿಸುವ ಬದಲು ಹಣವನ್ನು ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನು ನೋಡಿದರೆ ವಂಚನೆ ಮಾಡುವ ಅವರ ಉದ್ದೇಶ ಸ್ಪಷ್ಟವಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry