ಕೆಸಿಡಿಸಿಗೆ ಸಂಸದರ ಭೇಟಿ!

7

ಕೆಸಿಡಿಸಿಗೆ ಸಂಸದರ ಭೇಟಿ!

Published:
Updated:
ಕೆಸಿಡಿಸಿಗೆ ಸಂಸದರ ಭೇಟಿ!

ಬೆಂಗಳೂರು: ನಗರದ ಸೋಮಸಂದ್ರಪಾಳ್ಯದಲ್ಲಿನ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ಮಂಡಳಿಗೆ (ಕೆಸಿಡಿಸಿ) ಸಂಸದ ರಾಜೀವ್ ಚಂದ್ರಶೇಖರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಆಕೃತಿ ಸಿಲ್ವರ್ ಲೈನ್ ಕ್ಲಬ್ ಹೌಸ್‌ನಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಅವರು ಜನರ ಸಮಸ್ಯೆಗಳನ್ನು ಆಲಿಸಿದರು.

ಘಟಕದಿಂದ 24 ತಾಸೂ ದುರ್ನಾತ ಬೀರುತ್ತದೆ. ಇಲ್ಲಿ ವಾಸಿಸುವುದೇ ಕಷ್ಟವಾಗಿದೆ. ನಿಯಮ ಮೀರಿ ಹೆಚ್ಚಿನ ಕಸವನ್ನು ಇಲ್ಲಿ ಸುರಿಯಲಾಗುತ್ತಿದೆ ಎಂದು ನಿವಾಸಿಗಳು ದೂರಿದರು.

ಅಂತರ್ಜಲ ಪೂರ್ತಿ ವಿಷಯಮಯವಾಗಿದ್ದು, ಇದರಿಂದ ಅನೇಕರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳಿಗೆ ಮುಖ ಗವಸು ಹಾಕಿ ಶಾಲೆಗೆ ಕಳುಹಿಸಬೇಕಿದೆ. ಸಂಸ್ಕರಣೆಯಿಂದ ಹೊರಬರುವ ತ್ಯಾಜ್ಯ ನೀರು ಕೆರೆಯನ್ನು ಸೇರುತ್ತಿದ್ದು, ಕೆರೆಯೂ ಕಲುಷಿತಗೊಂಡಿದೆ ಎಂದು ಹೇಳಿದರು.

‘ಚುನಾವಣೆ ಮುಗಿದ ನಂತರ, ಆಯ್ಕೆಯಾಗುವ ಸರ್ಕಾರಕ್ಕೆ ನಿಮ್ಮ ಸಮಸ್ಯೆಗಳನ್ನು ತಿಳಿಸುತ್ತೇನೆ. ನಿಮಗಾಗಿ ಕೆಲಸ ಮಾಡುವುದಿಲ್ಲ. ನಿಮ್ಮ ಜೊತೆ ನಿಂತು ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ಶಾಸಕ ಸತೀಶ್ ರೆಡ್ಡಿ, ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ ಹಾಗು ನಿವಾಸಿಗಳ ಜೊತೆ ಸೋಮಸಂದ್ರಪಾಳ್ಯದ ಕೆರೆಗೂ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry