ವಿಂಡೀಸ್ ಎದುರಿನ ಸರಣಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಹಗಲು–ರಾತ್ರಿ ಪಂದ್ಯ ಆಡಲಿರುವ ಭಾರತ

7

ವಿಂಡೀಸ್ ಎದುರಿನ ಸರಣಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಹಗಲು–ರಾತ್ರಿ ಪಂದ್ಯ ಆಡಲಿರುವ ಭಾರತ

Published:
Updated:
ವಿಂಡೀಸ್ ಎದುರಿನ ಸರಣಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಹಗಲು–ರಾತ್ರಿ ಪಂದ್ಯ ಆಡಲಿರುವ ಭಾರತ

ಕೊಲ್ಕತ್ತ: ಭಾರತ ಕ್ರಿಕೆಟ್‌ ತಂಡ ಇದೇ ವರ್ಷ ವೆಸ್ಟ್‌ಇಂಡೀಸ್‌ ಎದುರು ಆಡಲಿರುವ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಒಂದು ಹಗಲು ರಾತ್ರಿಯ ಪಂದ್ಯವಾಗಿರಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿದ್ದಾರೆ.

‘ವೆಸ್ಟ್ಇಂಡೀಸ್ ಎದುರಿನ ಸರಣಿಯ ಎರಡು ಪಂದ್ಯಗಳಲ್ಲಿ ಒಂದನ್ನು ಹಗಲು ರಾತ್ರಿ ಪಂದ್ಯವಾಗಿ ಆಯೋಜಿಸುವ ಕುರಿತು ತಂಡದ ನಿರ್ವಾಹಕರು, ಆಯ್ಕೆದಾರರು, ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ ಒಪ್ಪಂದಕ್ಕೆ ಬರಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸದ್ಯ ಹೈದರಾಬಾದ್‌ ಹಾಗೂ ರಾಜ್‌ಕೋಟ್‌ನಲ್ಲಿ ಪಂದ್ಯಗಳು ನಡೆಯಲಿದ್ದು, ಬಿಸಿಸಿಐನಿಂದ ಪಂದ್ಯಗಳ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !