ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇವಿಟ್ವ ಬಿಡಿಸಿದ ದೀರ್ಘಾಯು ನಕ್ಷತ್ರದ ಗುಟ್ಟು

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕ್ರಿ.ಶ. 1912ರಲ್ಲಿ ನಕ್ಷತ್ರಗಳ ನೈಜಕಾಂತಿಮಾನಕ್ಕೂ ಮತ್ತು ಅವುಗಳ ಕಾಲಾವಧಿಗೂ ಇರುವ ಸಂಬಂಧವನ್ನು ವಿಶ್ವಕ್ಕೆ ತೋರಿಸಿಕೊಟ್ಟ ಏಕೈಕ ಮಹಿಳಾ ಖಗೋಳ ವಿಜ್ಞಾನಿ ಲೇವಿಟ್ವ.

ಗಣಕಯಂತ್ರದ ಕಾರ್ಯನಿರ್ವಾಹಕಿಯಾಗಿ ತುಂಬಾ ಕಡಿಮೆ ಸಂಬಳಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಹಾರ್ವರ್ಡ್ ಕಾಲೇಜಿನ ವೀಕ್ಷಣಾಲಯದ ಕಚೇರಿಯಲ್ಲಿ ಸೇರಿಕೊಂಡಿದ್ದರು. ನಕ್ಷತ್ರಗಳ ಬಗ್ಗೆ ಅಪಾರ ಆಸಕ್ತಿ ಇದ್ದುದರಿಂದ ಎರಡೂ ಕೆಲಸಗಳನ್ನು ನಿರ್ವಹಿಸುವುದು ಅವರಿಗೆ ಏನೂ ತೊಂದರೆಯಾಗಲಿಲ್ಲ. ಪೆರುವಿನ ಹಾರ್ವರ್ಡ್ ನಿಲ್ದಾಣದಲ್ಲಿರುವ 24 ಇಂಚಿನ ವಕ್ರೀಭವನ ದೂರದರ್ಶಕದ ಮೂಲಕ ತೆಗೆದ ಚಿತ್ರದ ತಟ್ಟೆಗಳನ್ನು ಪರೀಕ್ಷಿಸುವ ಕೆಲಸ ಈಕೆಯ ಪಾಲಿಗೆ ಬಂದಿತ್ತು. ಹಾಗೆಯೇ ಅದರಲ್ಲಿನ ಚಂಚಲ ನಕ್ಷತ್ರಗಳನ್ನು ಗುರುತಿಸುವ ಜವಾಬ್ದಾರಿಯೂ ಇತ್ತು.

ಸಾವಿರಾರು ಸಣ್ಣ-ಸಣ್ಣ ಸೂಜಿ ಮೊನೆಗಾತ್ರದ ನಕ್ಷತ್ರಗಳ ಬಿಂಬವನ್ನು ತಟ್ಟೆಯ ಮೇಲೆ ಬೇರೆ-ಬೇರೆ ದಿನಗಳಲ್ಲಿ ಸೆರೆ ಹಿಡಿದಿದ್ದು. ಅವುಗಳ ಪ್ರಕಾಶದ ಬದಲಾವಣೆ ಕಂಡು ಹಿಡಿಯಬೇಕಿತ್ತು. ಖಗೋಳ ಶಾಸ್ತ್ರಜ್ಞರಿಗೆ ಇಂತಹ ಸಣ್ಣಪುಟ್ಟ ಕೆಲಸಗಳಲ್ಲಿ ಸಮಯವನ್ನು ವ್ಯಯಮಾಡಲು ಮನಸ್ಸಾಗದೆ, ಇದಕ್ಕೆಂದೇ ಬೇರೆಯವರನ್ನು ನೇಮಕ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಸಾವಿರಾರು ಗಂಟೆಗಳ ಕಾಲವನ್ನು ಈ ಕೆಲಸದಲ್ಲಿಯೇ ಕಳೆದಿದ್ದ ಅವರು, ಆಕಾಶದ ಬಗೆಗೆ ಒಂದು ಬಗೆಯ ವ್ಯಾಮೋಹ ಬೆಳೆಸಿಕೊಂಡಿದ್ದರು.

ಪ್ರಪಂಚ ಪರ್ಯಟನೆ ಸಮಯದಲ್ಲಿ ಮೆಗೆಲ್ಲಾನ್ ಮತ್ತು ಅವನ ಜೊತೆಗಿದ್ದವರು ನೋಡಿದ್ದ ‘ಮೆಗೆಲ್ಲಾನ್ ಮೋಡಗಳು’ ಇರುವ ಜಾಗದ ಕೆಲಸವೂ ಈಕೆಯ ಪಾಲಿಗೆ ದೊರಕಿತ್ತು.

ಮೆಗೆಲ್ಲಾನ್ ಮೋಡಗಳು ತುಂಬಾ ಸೌಮ್ಯ ಪ್ರಕಾಶವುಳ್ಳವಾಗಿದ್ದು, ಒರಟು ಕೂದಲಿನ ತೇಪೆಯಂತೆ ಕಾಣುತ್ತಿದ್ದು, ಕ್ಷೀರ ಪಥದಿಂದ ಸಂಬಂಧ ಕಡಿದುಕೊಂಡಂತೆ ಕಾಣುತ್ತಿವೆ ಎಂದು ಪ್ರಥಮ ಬಾರಿಗೆ ತಿಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಯಾವುದೇ ನಕ್ಷತ್ರದ ಪ್ರಕಾಶ ಹೆಚ್ಚಿದಷ್ಟೂ, ಹೆಚ್ಚು ಕಾಲ ಬಾಳುತ್ತದೆ ಹಾಗೂ ಯಾವ ಬದಲಾವಣೆ ಕಾಣದೆ ಸ್ಥಿರವಾಗಿರಬಲ್ಲದು ಎಂದು ತಿಳಿಸಿ ಕೊಟ್ಟರು.

ನಕ್ಷತ್ರಗಳ ಕಾಲ ಹಾಗೂ ಹೊಳೆಯುವಿಕೆಯ ಬಗ್ಗೆ ಲೇವಿಟ್ ಕಂಡು ಹಿಡಿದದ್ದು, ಕ್ಷೀರ ಪಥದಲ್ಲಿನ ದೂರವನ್ನು ಕಂಡುಹಿಡಿಯುವಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತದೆ. ಈ ಆಧಾರದ ಮೇಲೆಯೇ ‘ಷಾಪ್ಲೇ’ ಕ್ಷೀರಪಥಗಳ ಕೋಷ್ಟಕವನ್ನು ತಯಾರಿಸಿ ಪ್ರಸಿದ್ಧಿಯಾಗಿದ್ದನು. ಈ ಕಾರ್ಯಕ್ಕೆ ಮೌಂಟ್ ವಿಲ್ಸನ್ಸ್‌ನಲ್ಲಿದ್ದ 60 ಇಂಚಿನ ದೊಡ್ಡ ದೂರದರ್ಶಕವನ್ನು ಬಳಸಲು ಷಾಪ್ಲೆಗೆ ನೆರವಾಗಿದ್ದು ಲೆವಿಟ್ವ ಅವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT