ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಳಿಗೆ ತುರುವೇಕೆರೆ ತತ್ತರ

ನೆಲಕ್ಕುರುಳಿದ ಅರಳೀಮರ, ತೆಂಗಿನ ಮರಗಳು; ಮುರಿದು ಬಿದ್ದ ವಿದ್ಯುತ್‌ ಕಂಬಗಳು
Last Updated 25 ಏಪ್ರಿಲ್ 2018, 13:02 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ವಿವಿಧ ಕಡೆ ಮಂಗಳವಾರ ಸಂಜೆ ಮಳೆ ಗಾಳಿ ಬೀಸಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಪಟ್ಟಣದ ಮಡಿವಾಳರ ಬೀದಿಯಲ್ಲಿ ಅರಳೀಮರ ಬಿದ್ದು, 2 ವಿದ್ಯುತ್ ಕಂಬಗಳು ಮುರಿದಿವೆ. ಬಾವಿಕೆರೆ ಏರಿ ಮತ್ತು ಬ್ರಾಹ್ಮಣರ ಬೀದಿಯಲ್ಲಿ ತೆಂಗಿನ ಮರ ಬಿದ್ದು 3 ಕಂಬಗಳು ಮತ್ತು ಟ್ರಾನ್ಸ್ ಫಾರ್ಮರ್‌ ನೆಲಕ್ಕೆ ಉರುಳಿದೆ.

ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಮರದ ಕೊಂಬೆ ಬಿದ್ದು, ವಿದ್ಯುತ್ ಲೈನ್ ಮುರಿದಿದೆ. ಬಸವೇಶ್ವರ ನಗರದ ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ತೆಂಗಿನ ಮರ ಬಿದ್ದು, ಟ್ರಾನ್ಸ್‌ ಫಾರ್ಮರ್‌ ಜಖಂಗೊಂಡಿದೆ. ಆರ್.ಎಂ.ಸಿ ಹಿಂಭಾಗದ ತೆಂಗಿನ ಮರ ಮುರಿದು ಬಿದ್ದು 2 ವಿದ್ಯುತ್ ಕಂಬಗಳು ಧರೆಗುರುಳಿವೆ.

ಮಾಯಸಂದ್ರ ಹೋಬಳಿಯ ಕಾಮನಹಳ್ಳಿಯಲ್ಲಿ 4 ವಿದ್ಯುತ್ ಕಂಬಗಳು ಮುರಿದಿವೆ. ಹಾಗೆಯೇ ಕಸಬಾದ ಬೇವಿನಹಳ್ಳಿ 1 ಮರ, ಪಟ್ಟಣದ ಅನುಕಾರ್ ಸೆಂಟರ್ ಮುಂಭಾಗದ ಮರ ಬುಡ ಮೇಲಾಗಿದೆ. ಕಾಮನಹಳ್ಳಿ, ಲಿಂಬೇನಹಳ್ಳಿ, ಭೈತರಹೊಸಹಳ್ಳಿ, ಯರದೇಹಳ್ಳಿ, ಸೀಗೆಹಳ್ಳಿ, ಅಂಚೀಹಳ್ಳಿ, ಮಲ್ಲೇನಹಳ್ಳಿ ಮತ್ತು ದಬ್ಬೇಘಟ್ಟ ಹೋಬಳಿಯ ಕೆಲ ಕಡೆ ಉತ್ತಮ ಮಳೆಯಾಗಿದ್ದು, ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಈಗಾಗಲೆ ಎಲ್ಲ ಸಿಬ್ಬಂದಿ ಮತ್ತು ನಾವು ಮಳೆಯಿಂದ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ, ಮರ ಮತ್ತು ಕಂಬಗಳನ್ನು ತೆರವುಗೊಳಿಸಿ, ವಿದ್ಯುತ್ ವ್ಯತ್ಯಯವಾಗದಂತೆ ವ್ಯವಸ್ಥೆ ಮಾಡಿದ್ದೇವೆ ಎಂದು ಪ್ರಭಾರ ಸಹಾಯಕ ಎಂಜಿನಿಯರ್ ಸಿ.ಎಸ್.ಧರಣೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಡುಗು ಸಮೇತ ಮಳೆ

ಮಧುಗಿರಿ: ಪಟ್ಟಣ ಹಾಗೂ ತಾಲ್ಲೂಕು ವಿವಿಧ ಗ್ರಾಮಗಳಲ್ಲಿ ಮಂಗಳವಾರ ಗುಡುಗು ಸಮೇತ ಮಳೆಯಾಗಿದೆ. ಮಧ್ಯಾಹ್ನ 2.30ರ ಸಮಯದಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ಕೆಂಗಟ್ಟಿದ್ದ ಜನರಿಗೆ ಹಾಗೂ ಭೂಮಿ ಸ್ವಲ್ಪ ಮಟ್ಟಿಗೆ ತಂಪು ಕಂಡಂತಾಗಿದೆ. ಶಾಸಕ ಕೆ.ಎನ್.ರಾಜಣ್ಣ ನಾಮ ಪತ್ರ ಸಲ್ಲಿಸಿ, ಮೆರವಣಿಗೆ ಮುಗಿಯುವ ಸಮಯದಲ್ಲಿ ಮಳೆ ಬಂದ ಕಾರಣ ಕಾರ್ಯಕರ್ತರು ತಮ್ಮ ಊರುಗಳಿಗೆ ತೆರಳಲು ಸ್ವಲ್ಪ ಮಟ್ಟಿಗೆ ಅಡಚಣೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT