ಶನಿವಾರ, ಡಿಸೆಂಬರ್ 14, 2019
21 °C

30ನೇ ವಸಂತಕ್ಕೆ ಕಾಲಿಟ್ಟ ಸಮಂತಾ ಅಕ್ಕಿನೇನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಬಹುಭಾಷಾ ನಟಿ ಸಮಂತಾ ಅಕ್ಕಿನೇನಿ ಅವರು ಶನಿವಾರ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ನಟ ನಾಗಚೈತನ್ಯ ಅವರರೊಂದಿಗೆ ವಿವಾಹವಾಗಿ ತಮ್ಮ ತಾರಾ ವರ್ಚಸ್ಸನ್ನು ದುಪ್ಪಟ್ಟುಗೊಳಿಸಿಕೊಂಡಿರುವ ಸಮಂತಾ, ಮದುವೆಯ ನಂತರ ಅಲ್ಪಾವಧಿಯ ಬ್ರೇಕ್‌ ಪಡೆದು ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ಸಮಂತಾ ಅಭಿನಯದ ‘ಮಹಾನದಿ’ ಮತ್ತು ‘ನಾಡಿಗಯ್ಯರ್ ತಿಲಗಮ್‌’ ಎರಡು ಚಿತ್ರಗಳು ಮುಂದಿನ ವಾರ ಒಂದೇ ಬಾರಿಗೆ ತೆರೆಕಾಣುವ ಸಾಧ್ಯತೆ ಇದೆ.

ಉಳಿದಂತೆ ಸೂಪರ್‌ ಡಿಲಕ್ಸ್, ಸೀಮರಾಜಾ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದ್ದು, ತಮಿಳು ಮತ್ತು ತೆಲುಗಿನಲ್ಲಿ ತೆರೆಕಾಣಲಿರುವ ಕನ್ನಡದ ಸೂಪರ್‌ ಹಿಟ್‌ ಸಿನಿಮಾ ‘ಯೂ ಟರ್ನ್‌’ನಲ್ಲಿಯೂ ಸಮಂತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ಇತ್ತೀಚೆಗೆ ಬಿಡುಗಡೆಯಾದ ರಾಮ್‌ಚರಣ್ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ತೆಲುಗು ಚಿತ್ರ ‘ರಂಗಸ್ಥಲಂ’ನ ‘ಎಂತ ಸಕ್ಕಗುನ್ನಾವೇ...’ (ಎಷ್ಟು ಚೆನ್ನಾಗಿರುವೆ) ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಜತೆಗೆ, ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. 

ಇದನ್ನೂ ಓದಿ...

‘ಎಂತ ಸಕ್ಕಗುನ್ನಾವೇ...’ ಉಪಮಾನ ಉಪಮೇಯಗಳ ಹೊಗಳಿಕೆ

ಸಪ್ತಪದಿ ತುಳಿದ್ರು ಸಮಂತಾ– ನಾಗಚೈತನ್ಯ

 

ಪ್ರತಿಕ್ರಿಯಿಸಿ (+)