ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌– ಜಾಕ್ವೆಲಿನ್‌ ಬೈಕ್‌ ಸವಾರಿ

ಲೇಹ್–ಲಡಾಕ್‌ ಜಾಲಿ ರೈಡ್
Last Updated 29 ಏಪ್ರಿಲ್ 2018, 11:34 IST
ಅಕ್ಷರ ಗಾತ್ರ

ಶ್ರೀನಗರ: ಮಾದಕ ಸುಂದರಿ ಜಾಕ್ವೆಲಿನ್‌ ಫರ್ನಾಂಡಿಸ್‌ ಜೊತೆ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಲೇಹ್‌– ಲಡಾಕ್‌ ಪರ್ವತ ಪ್ರದೇಶದಲ್ಲಿ ಬೈಕ್‌ ಸವಾರಿ ಮಾಡಿರುವ ಸಂಗತಿ ಸಿನಿಪ್ರಿಯರ ಗಮನ ಸೆಳೆದಿದೆ.

‘ರೇಸ್‌ 3’ ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ಸಾಗಿದೆ. ಇದೀಗ ಚಿತ್ರೀಕರಣವು ಲೇಹ್–ಲಡಾಕ್‌ಗೆ ಸ್ಥಳಾಂತರಗೊಂಡಿದೆ. ಇದೇ ವೇಳೆ ಸಲ್ಮಾನ್‌–ಜಾಕ್ವೆಲಿನ್‌ ಫರ್ನಾಂಡಿಸ್‌, ನಿರ್ದೇಶಕ ರೆಮೊ ಡಿಸೋಜ ಹಾಗೂ ಚಿತ್ರತಂಡದ ಕೆಲ ಸದಸ್ಯರು ಮೂರು– ನಾಲ್ಕು ಬೈಕ್‌ಗಳಲ್ಲಿ ಲೇಹ್‌– ಲಡಾಖ್‌ಗೆ ತೆರಳಿದ್ದರು.

ಬೈಕ್‌ನಲ್ಲಿ ರೈಡ್‌ ಹೋಗುತ್ತಿರುವ ಖುಷಿಯ ಕ್ಷಣಗಳನ್ನು ಜಾಕ್ವೆಲಿನ್ ವಿಡಿಯೊ ಮಾಡಿಕೊಂಡಿದ್ದರು. ಈ ವಿಡಿಯೊವನ್ನು ಸಲ್ಮಾನ್‌ ಖಾನ್‌ ಅವರ ಬಾಡಿಗಾರ್ಡ್‌ ಷೇರಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದನ್ನು ಜಾಕ್ವೆಲಿನ್ ಮತ್ತು ಸಲ್ಮಾನ್ ಖಾನ್ ಶೇರ್ ಮಾಡಿಕೊಂಡರು.

‘ಪರ್ವತದ ಸಾಲುಗಳ ನಡುವೆ ಬೈಕ್‌ ರೈಡಿಂಗ್‌ ಅದ್ಭುತ ಅನುಭವ’ ಎಂದು ಜಾಕ್ವೆಲಿನ್‌ ಬರೆದುಕೊಂಡಿದ್ದಾರೆ. ಈ ವಿಡಿಯೊಗೆ ಸಲ್ಮಾನ್ ಅಭಿಮಾನಿಗಳು ಪ್ರಶಂಸೆಗಳು ಹರಿದುಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT