ಭೂತಯ್ಯನ ಮೊಮ್ಮಗ ‘ಅಯ್ಯು’

7

ಭೂತಯ್ಯನ ಮೊಮ್ಮಗ ‘ಅಯ್ಯು’

Published:
Updated:
ಭೂತಯ್ಯನ ಮೊಮ್ಮಗ ‘ಅಯ್ಯು’

ಭೂತಯ್ಯನ ಮೊಮ್ಮಗ ‘ಅಯ್ಯು’

ಅರಸು ನಾಗರಾಜ್ ಫಿಲಂಸ್ ಲಾಂಛನದಲ್ಲಿ, ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್ ಈ ಮೂವರೂ ಸೇರಿ ನಿರ್ಮಿಸಿರುವ ‘ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.

ನಂದಕುಮಾರ್ ಛಾಯಾಗ್ರಾಹಕ, ಶ್ರೀನಿವಾಸ್ ಬಾಬು ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ಚಿಕ್ಕಣ್ಣ, ಶ್ರುತಿ ಹರಿಹರನ್, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ರಾಕ್‍ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಮಂಜು ಗಾಳಿಪುರ, ಸಿದ್ದಿ, ಕೀರ್ತಿರಾಜ್, ಮೋಹನ್ ಜುನೇಜಾ, ಉಮೇಶ್, ಮನ್‍ದೀಪ್ ರಾಯ್, ವರ್ಧನ್ ಮುಂತಾದವರಿದ್ದಾರೆ.

‘ಕಿಚ್ಚು’

ಕಿವಿ ಕೇಳಿಸದ, ಮಾತು ಬಾರದ ಧ್ರುವ ಶರ್ಮ ಹಾಗೂ ಅಭಿನಯ ನಟಿಸಿರುವ ಚಿತ್ರ ‘ಕಿಚ್ಚು’. ಅರಣ್ಯ ರಕ್ಷಿಸಿ ಎಂಬ ವಿಚಾರವನ್ನು ಇಟ್ಟುಕೊಂಡು ನಿರ್ದೇಶಕ ಪ್ರದೀಪ್ ರಾಜ್ ‘ಕಿಚ್ಚು’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಅರಣ್ಯ ಸಂಪತ್ತನ್ನು ನಾಶ ಮಾಡುವುದು ಮಾನವ ಜನ್ಮಕ್ಕೆ ಮಾರಕ ಎಂದು ಸಹ ಈ ಸಿನಿಮಾದಿಂದ ಹೇಳಲಾಗುತ್ತಿದೆ.

ರೂಬಿ ಕ್ರಿಯೇಷನ್ ಹಾಗೂ ಇಂದ್ರಜಾಲ ಅಡ್ವರ್ಟೈಸ್ಮಂಟ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಚಿದಂಬರಂ ಎಸ್.ಎನ್.ಫಾಜಿಲ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಕಿಚ್ಚ ಸುದೀಪ್ ಅವರ ಪ್ರಮುಖ ಪಾತ್ರದ ಜೊತೆಗೆ ವಿಶೇಷ ಪಾತ್ರದಲ್ಲಿ ರಾಗಿಣಿ ದ್ವಿವೇದಿ, ಸಾಯಿಕುಮಾರ್, ಪ್ರದೀಪ್ ರಾಜ್, ಸುಚೀಂದ್ರಪ್ರಸಾದ್, ರಘು, ಅಮೋಘ್, ಕುಮಾರ್ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry