ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದಲ್ಲಿ ಬೆಳಗಿದ ಪ್ಲಾಸ್ಟಿಕ್ ವಿರೋಧಿ ಪ್ರಜ್ಞೆ

Last Updated 3 ಮೇ 2018, 19:30 IST
ಅಕ್ಷರ ಗಾತ್ರ

ದಿನನಿತ್ಯದ ಜೀವನದಲ್ಲಿ ನಾವು ತಿನ್ನುವುದೊಂದನ್ನು ಬಿಟ್ಟು ಎಲ್ಲಾ ಕೆಲಸಗಳಿಗೂ ಪ್ಲಾಸ್ಟಿಕನ್ನೇ ಅವಲಂಬಿಸಿದ್ದೇವೆ. ಪ್ಲಾಸ್ಟಿಕ್ ಪರಿಸರದ ಮಹಾಶತ್ರು ಅದು ಎಂದಿಗೂ ಕರಗದು, ಕೊಳೆಯದು, ನಾಶವಾಗದು. ಅದರ ವಿಘಟನೀಯ ಗುಣ ಎಲ್ಲಾ ಜೀವಿಗಳ ಪಾಲಿನ ಮೃತ್ಯು ಎಂಬ ವಿಷಯ ನಮಗೆ ತಿಳಿದಿದ್ದರೂ ಸಹ ಅದನ್ನು ಅತಿಯಾಗಿ ಬಳಸುತ್ತಿದ್ದೇವೆ. ಆ ಮೂಲಕ ನಮ್ಮ ಅಂತ್ಯಕ್ಕೆ ನಾವೇ ಕಾರಣವಾಗುತ್ತಿದ್ದೇವೆ. ಇದು ಕೇವಲ ನಮ್ಮ ಅಂತ್ಯವಲ್ಲ, ಭೂಮಿ ಮೇಲೆ ವಾಸಿಸುವ ಎಲ್ಲಾ ಜೀವಿಗಳ ಅಂತ್ಯ.

ಇಲ್ಲಿ ಪ್ಲಾಸ್ಟಿಕನ್ನು ಬಳಸುವ ಪ್ರತಿಯೊಬ್ಬ ಮನುಷ್ಯನೂ ಕೊಲೆಗಡುಕ ಹೇಗೆಂದರೆ, ಪ್ಲಾಸ್ಟಿಕ್‌ನಿಂದ ತಾನೊಬ್ಬನೇ ಸಾಯದೆ ಇತರ ಮುಗ್ಧಜೀವಿಗಳ ಸಾವಿಗೆ ಕಾರಣವಾಗುತ್ತಿದ್ದಾನೆ ಮನುಷ್ಯ. ಆ ಜೀವಿಗಳೇನಾದರೂ ತಿರುಗಿ ಬಿದ್ದು ನನ್ನನ್ನು ಕೊಲ್ಲುವ ಅಧಿಕಾರವನ್ನು ನಿನಗೆ ಕೊಟ್ಟವರಾರು ಎಂಬ ಪ್ರಶ್ನೆಯನ್ನೆತ್ತಿದರೆ ನಮ್ಮಿಂದ ಅವಕ್ಕೆ ಸಿಗುವ ಉತ್ತರವೇನು ಎನ್ನುವ ಸಂದೇಶವನ್ನು ‘ದಿ ಟ್ರಾನ್ಸ್‌ಪರೆಂಟ್ ಟ್ರಾಪ್‌’ ಹೇಳುತ್ತದೆ.

ಆರಂಭದಲ್ಲಿ ಶುರುವಾಗಿದ್ದ ಪ್ಲಾಸ್ಟಿಕ್‌ ನರ್ತನ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟಿಸಿತು. ಮನುಷ್ಯ ಪ್ಲಾಸ್ಟಿಕ್‌ ಅನ್ನು ಹೇಗೆ ಅವಲಂಬಿಸಿದ್ದಾನೆ ಎಂಬುದು ಪ್ರೇಕ್ಷಕನ ಮನಸನ್ನು ತಲುಪಿತು. ವೇದಿಕೆಯ ಮೇಲೆ ಏಳುವ ಹೊಗೆ ಮಾದರಿ, ನಿಜವಾಗಿಯೂ ಪ್ಲಾಸ್ಟಿಕ್ ಅನ್ನು ಸುಡುವ ರೀತಿಯಲ್ಲೇ ಬಿಂಬಿತವಾಗುತ್ತಿತ್ತು. ಬೀದಿನಾಯಿಗಳು, ಪಕ್ಷಿಗಳು, ಜಲಚರಗಳು, ಪ್ಲಾಸ್ಟಿಕ್‌ನಿಂದ ಹೇಗೆ ಸಾವನ್ನಪ್ಪುತ್ತಿವೆ ಎಂಬ ಚಿತ್ರಣ ಪ್ರೇಕ್ಷಕನ ಮನಸನ್ನು ಕಲಕುವಂತಿತ್ತು. ಇಲ್ಲಿ ಆಕಾಶವನ್ನು, ಸಮುದ್ರವನ್ನು, ಒಂದು ಉದ್ದನೆಯ ಪ್ಲಾಸ್ಟಿಕ್ ಕವರ್‌ನಲ್ಲಿ ತೋರಿಸಿದ ಕಲಾವಿದರ ಚಾಕಚಕ್ಯತೆ ಮೆಚ್ಚುವಂತಹದ್ದು.

ವೇದಿಕೆಯ ಮೇಲೆ ನಿಧಾನವಾಗಿ ನಡೆಯುತಿದ್ದ ಕ್ರಿಯೆಗಳು ಪ್ರೇಕ್ಷಕರ ತಾಳ್ಮೆಯನ್ನು ಕೆಣಕುವಂತಿದ್ದವು. ನಂತರ ಪ್ರೇಕ್ಷಕರು ಆ ನಿಧಾನಗತಿಗೆ ಹೊಂದಿಕೊಂಡು ಅದರ ಸವಿಯನ್ನು ಅನುಭವಿಸಲು ಆರಂಭಿಸಿದರು. ಅಲ್ಲಿ ಪ್ರಾಣಿ–ಪಕ್ಷಿಯ ನರಳಾಟ ಪ್ರೇಕ್ಷಕನಲ್ಲೂ ನರಳಾಟವನ್ನುಂಟು ಮಾಡಿದ್ದು ವಿಶೇಷ. ಹೆಣ್ಣುನಾಯಿ ಸಾವನ್ನಪ್ಪಿದಾಗ ಗಂಡು ನಾಯಿಯ ಅಸಹಾಯಕತೆ ಪ್ರಾಣಿಗಳ ಅಂತಃಕರಣವನ್ನು ತೋರಿಸುವಂತಿತ್ತು. ಕೊನೆಗೆ ವೇದಿಕೆಯ ಮೇಲೆ ಬಿದ್ದಿದ್ದ ಪೇಪರಿನ ಎರಡು ಚೂರುಗಳು, ಅವು ಎರಡೇ ಎಂಬ ಬೇಜವಾಬ್ದಾರಿತನವನ್ನು ತೋರಿದರೆ ಮುಂದೆ ಅದೇ ಪರ್ವತವಾಗುತ್ತೆ ಎನ್ನುವ ಸಂದೇಶ ಅದ್ಭುತವಾಗಿತ್ತು.

‘ಕುರ್ಲಿ’ ಕಿರುಚಿತ್ರದ ಕುರಿತು
ಸಿದ್ಧಿ ಸುಬ್ಬ ತೋಟವೊಂದರಲ್ಲಿ ಬಾಳೆಗೊನೆ ಕದ್ದು ಬಚ್ಚಿಡುತ್ತಾನೆ. ಅದೇ ತೋಟಕ್ಕೆ ಅವನ ಮಕ್ಕಳು ಏಡಿ ಹಿಡಿಯಲು ಹೋಗುತ್ತಾರೆ. ತೋಟದ ಮಾಲೀಕರಿಗೆ ಕದ್ದ ಬಾಳೆಗೊನೆ ಸಿಗುತ್ತದೆ. ಕದ್ದ ಆರೋಪ ಸಿದ್ಧಿ ಸುಬ್ಬನ ಮಗನ ಮೇಲೆ ಬರುತ್ತದೆ. ಆದರೆ, ಮಗ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಅವನಿಗೆ ಪರಿಸ್ಥಿತಿಯ ಅರಿವೇ ಇಲ್ಲ. ಇದು ನಿರ್ದೇಶಕ ನಟೇಶ್‌ ಹೆಗಡೆ ನಿರ್ದೇಶನದ ‘ಕುರ್ಲಿ’ ಕಿರುಚಿತ್ರದ ಕಥಾವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT