4

ಆಸ್ಟ್ರೇಲಿಯಾ ತಂಡಕ್ಕೆ ಲ್ಯಾಂಗರ್‌ ಕೋಚ್‌

Published:
Updated:
ಆಸ್ಟ್ರೇಲಿಯಾ ತಂಡಕ್ಕೆ ಲ್ಯಾಂಗರ್‌ ಕೋಚ್‌

ಸಿಡ್ನಿ (ಎಎಫ್‌ಪಿ): ಹಿರಿಯ ಕ್ರಿಕೆಟ್ ಆಟಗಾರ ಜಸ್ಟಿನ್‌ ಲ್ಯಾಂಗರ್‌ ಅವರು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಗುರುವಾರ ನೇಮಕಗೊಂಡಿದ್ದಾರೆ.

ನಾಲ್ಕು ವರ್ಷಗಳ ಅವಧಿಗೆ ಟೆಸ್ಟ್‌, ಏಕದಿನ ಹಾಗೂ ಟ್ವೆಂಟಿ–20 ಮಾದರಿ ಗಳಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕ ರಾಗಿದ್ದ ಸ್ಟೀವ್‌ ಸ್ಮಿತ್‌ ಹಾಗೂ ಉಪನಾಯಕರಾಗಿದ್ದ ಡೇವಿಡ್‌ ವಾರ್ನರ್‌ ಅವರು ಚೆಂಡು ವಿರೂಪ ಪ್ರಕರಣದಿಂದಾಗಿ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.

ಈ ಪ್ರಕರಣದ ನಂತರ ತಂಡದ ಕೋಚ್‌ ಹುದ್ದೆಗೆ ಡೇವಿಡ್‌ ಲೆಹ್ಮನ್‌ ಅವರು ರಾಜೀನಾಮೆ ನೀಡಿದ್ದರು.

‘ಅನೇಕ ಹಿರಿಯ ಆಟಗಾರರು ಈ ಹುದ್ದೆಯ ಸ್ಪರ್ಧೆಯಲ್ಲಿದ್ದರು. ಆದರೆ, ಕ್ರಿಕೆಟ್‌ ಆಸ್ಟ್ರೇಲಿಯಾದ ಅಧಿಕಾರಿಗಳು (ಸಿಎ) ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಆ ಹುದ್ದೆಗೆ ಲ್ಯಾಂಗರ್‌ ಅವರು ಸೂಕ್ತ ಎಂದು ನಿರ್ಧರಿಸಿದರು. ದೇಶಿ ಕ್ರಿಕೆಟ್‌ ನಲ್ಲಿ ಕೋಚ್ ಆಗಿ ತೋರಿದ ಸಾಧನೆಯ ಆಧಾರದಲ್ಲಿ ಅವರನ್ನು ಆಯ್ಕೆ ಮಾಡ ಲಾಗಿದೆ. ಕೋಚ್‌ ಆಗಿ ಅವರು ತಂಡವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸ ನಮಗೆ ಇದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್‌ ಸದರ್‌ಲೆಂಡ್‌ ಹೇಳಿದ್ದಾರೆ.

‘ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ಜವಾಬ್ದಾರಿ ಇದೆ. ಚೆಂಡು ವಿರೂಪ ಪ್ರಕರಣದಿಂದಗಿ ಆಸ್ಟ್ರೇಲಿಯಾ ಆಟಗಾರರ ನಡವಳಿಕೆ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ಆ ಬಗ್ಗೆ ಮೊದಲು ಗಮನಹರಿಸಬೇಕಾಗಿದೆ. ಗೌರವ ಸಂಪಾದಿಸುವುದು ಎಲ್ಲಕ್ಕಿಂತ ಮುಖ್ಯ’ ಎಂದು ಲ್ಯಾಂಗರ್‌ ಹೇಳಿದ್ದಾರೆ.

‘ಭಾರತ ವಿರುದ್ಧ ಗೆದ್ದರೆ ಮಾತ್ರ ಶ್ರೇಷ್ಠ ತಂಡ’: ಭಾರತ ತಂಡದ ವಿರುದ್ಧ ಟೆಸ್ಟ್‌ ಸರಣಿ ಜಯಿಸಿದರೆ ಮಾತ್ರ ಆಸ್ಟ್ರೇಲಿಯಾವನ್ನು ಶ್ರೇಷ್ಠ ತಂಡ ಎಂದು ಪರಿಗಣಿಸಬಹುದು ಎಂದು ಅವರು ಹೇಳಿದರು.

‘ನಾವು ವಿಶ್ವಕಪ್‌, ಟ್ವೆಂಟಿ–20 ವಿಶ್ವಕಪ್‌, ಆ್ಯಷಸ್‌ ಹಾಗೂ ಇನ್ನಿತರ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಹಲವು ಟೂರ್ನಿಗಳಿವೆ. ಭಾರತ ತಂಡವನ್ನು ಅವರದೇ ನೆಲದಲ್ಲಿ ಸೋಲಿಸಬೇಕು. ಅದೊಂದು ಸವಾಲು’ ಎಂದರು.

‘2004ರಲ್ಲಿ ಭಾರತವನ್ನು ಅದರ ತವರಿನಲ್ಲಿ ಮಣಿಸಿದ್ದೇವು. ಆಗ ನಾನೂ ತಂಡದಲ್ಲಿದ್ದೆ. ವಿದೇಶಿ ಪಿಚ್‌ಗಳಲ್ಲಿ ಉತ್ತಮ ಸಾಧನೆ ತೋರುವುದು ಅವಶ್ಯ. ಆಗ ಮಾತ್ರ, ನಮ್ಮ ತಂಡದ ಶಕ್ತಿ ಗೊತ್ತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry