‘ಸಚಿನ್‌ ಶೈಲಿಯಲ್ಲಿ ಪೃಥ್ವಿ ಶಾ ಬ್ಯಾಟಿಂಗ್‌’

7

‘ಸಚಿನ್‌ ಶೈಲಿಯಲ್ಲಿ ಪೃಥ್ವಿ ಶಾ ಬ್ಯಾಟಿಂಗ್‌’

Published:
Updated:
‘ಸಚಿನ್‌ ಶೈಲಿಯಲ್ಲಿ ಪೃಥ್ವಿ ಶಾ ಬ್ಯಾಟಿಂಗ್‌’

ಮುಂಬೈ: ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಬ್ಯಾಟ್ಸಮನ್‌ ಪೃಥ್ವಿ ಶಾ ಅವರ ಬ್ಯಾಟಿಂಗ್‌ ತಂತ್ರಗಾರಿಕೆ ಸಚಿನ್‌ ತೆಂಡೂಲ್ಕರ್‌ ಅವರ ಬ್ಯಾಟಿಂಗ್‌ ಅನ್ನು ನೆನಪಿಸುತ್ತದೆ ಎಂದು ಆಸ್ಟ್ರೇಲಿಯಾದ ಹಿರಿಯ ಆಟಗಾರ ಮಾರ್ಕ್‌ ವಾ ಅಭಿಪ್ರಾಯಪಟ್ಟಿದ್ದಾರೆ.

‘ಸಚಿನ್‌ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಬಳಸುತ್ತಿದ್ದ ತಂತ್ರಗಾರಿಕೆಗೂ ಶಾ ಅವರ ಬ್ಯಾಟಿಂಗ್‌ ಕೌಶಲಕ್ಕೂ ಸಾಮ್ಯತೆ ಇದೆ. ಅವರು ಬ್ಯಾಟಿಂಗ್‌ ಮಾಡುವ ರೀತಿ, ರಕ್ಷಣಾತ್ಮಕ ಆಟ, ಚೆಂಡನ್ನು ಬೌಂಡರಿಗೆ ಅಟ್ಟುವ ರೀತಿಯನ್ನು ನೋಡುತ್ತಿದ್ದರೆ ತೆಂಡೂಲ್ಕರ್‌ ಅವರ ನೆನಪು ತರುತ್ತದೆ. ಎಲ್ಲ ರೀತಿಯ ಬೌಲರ್‌ಗಳನ್ನು ದಂಡಿಸುವ ಅವರ ಪ್ರತಿಭೆ ನಿಜಕ್ಕೂ ಆಕರ್ಷಕ’ ಎಂದು ಅವರು ಹೇಳಿದ್ದಾರೆ.

ಮುಂಬೈನ ಪೃಥ್ವಿ ಶಾ ಅವರು ಇಲ್ಲಿಯವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ 166.66 ಸ್ಟ್ರೈಕ್‌ ರೇಟ್‌ನೊಂದಿಗೆ 140 ರನ್‌ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಆಡಿದ ಎರಡನೇ ಪಂದ್ಯದಲ್ಲಿ ಅವರು ಅರ್ಧಶತಕ ದಾಖಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry