‘ವಿಶ್ವಕಪ್‌ಗೆ ರಷ್ಯಾ ಸಿದ್ಧ’: ಜಿಯಾನಿ ಇನ್ಫೆಂಟಿನೊ

7

‘ವಿಶ್ವಕಪ್‌ಗೆ ರಷ್ಯಾ ಸಿದ್ಧ’: ಜಿಯಾನಿ ಇನ್ಫೆಂಟಿನೊ

Published:
Updated:
‘ವಿಶ್ವಕಪ್‌ಗೆ ರಷ್ಯಾ ಸಿದ್ಧ’: ಜಿಯಾನಿ ಇನ್ಫೆಂಟಿನೊ

ಮಾಸ್ಕೊ (ಎಎಫ್‌ಪಿ): ಮುಂದಿನ ಫುಟ್‌ಬಾಲ್ ವಿಶ್ವಕಪ್‌ಗೆ ಆತಿಥ್ಯ ವಹಿಸಲು ರಷ್ಯಾ ಸಂಪೂರ್ಣ ಸಜ್ಜಾಗಿದೆ ಎಂದು ಹೇಳಿರುವ ಫಿಫಾ ಮುಖ್ಯಸ್ಥ ಜಿಯಾನಿ ಇನ್ಫೆಂಟಿನೊ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಜೂನ್‌ 14ರಿಂದ ಜುಲೈ 15ರ ವರೆಗೆ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿ ನಡೆಯಲಿದ್ದು ಇದರ ಅಂಗವಾಗಿ ಇನ್ಫೆಂಟಿನೊ ಸೋಚಿಯಲ್ಲಿರುವ ರೆಸಾರ್ಟ್‌ವೊಂದರದಲ್ಲಿ ಗುರುವಾರ ಪುಟಿನ್ ಅವರನ್ನು ಭೇಟಿಯಾಗಿದ್ದರು.

ಕ್ರೀಡಾಂಗಣದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಮತ್ತು ಇತರ ವಿವಾದಗಳಿಂದಾಗಿ ಟೂರ್ನಿಯ ಸಿದ್ಧತೆ ಮೇಲೆ ಕರಿನೆರಳು ಬಿದ್ದಿತ್ತು. ಹೀಗಾಗಿ ಈ ಭೇಟಿ ಮಹತ್ವದ್ದು ಎನಿಸಿತ್ತು.

‘20 ವರ್ಷಗಳಿಂದ ವಿವಿಧ ಬಗೆಯ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಇಲ್ಲಿನ ಆಡಳಿತ ಮಾಡಿದಂಥ ಸಿದ್ಧತೆಗಳನ್ನು ಎಲ್ಲಿಯೂ ಕಂಡಿಲ್ಲ. ಟೂರ್ನಿಗಾಗಿ 11 ನಗರಗಳಲ್ಲಿ ಒಟ್ಟು 12 ಕ್ರೀಡಾಂಗಣಗಳನ್ನು ಸಜ್ಜುಗೊಳಿಸಲಾಗಿದೆ’ ಎಂದು ಇನ್ಫೆಂಟಿನೊ ತಿಳಿಸಿದರು.

ಪುಟಿನ್ ಮಾತನಾಡಿ ಅತ್ಯುತ್ತಮ ಟೂರ್ನಿಯನ್ನು ಕಾಣಿಕೆಯಾಗಿ ನೀಡಲು ನಾವು ಸಜ್ಜಾಗಿದ್ದು ಗುಣಮಟ್ಟದಲ್ಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry