ಶುಕ್ರವಾರ, ಫೆಬ್ರವರಿ 26, 2021
22 °C

ಕ್ರಾಂಪ್ಟನ್‌ ಗ್ರೀವ್ಸ್‌ ಫ್ಯಾನ್‌ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಾಂಪ್ಟನ್‌ ಗ್ರೀವ್ಸ್‌ ಫ್ಯಾನ್‌ ಮಾರುಕಟ್ಟೆಗೆ

ಬೆಂಗಳೂರು: ಕ್ರಾಂಪ್ಟನ್‌ ಗ್ರೀವ್ಸ್‌ ಕನ್ಸುಮರ್‌ ಎಲೆಕ್ಟ್ರಿಕಲ್ಸ್‌, ಹೊಸ ವಿನ್ಯಾಸದ ಫ್ಯಾನ್‌ ಮತ್ತು ಕೂಲರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಎಲಿವೇಟೆಡ್‌ ಬ್ಲೇಡ್‌ ತಂತ್ರಜ್ಞಾನದ, ಸಾಮಾನ್ಯ ಫ್ಯಾನ್‌ಗಿಂತ ಶೇ 50ರಷ್ಟು ಹೆಚ್ಚು ಪ್ರದೇಶಕ್ಕೆ ಗಾಳಿ ತಲುಪಿಸುವ ‘ಏರ್‌–360’ ಬ್ರ್ಯಾಂಡ್‌ನ ಫ್ಯಾನ್‌ ಮತ್ತು ಕಿಟಕಿಯಲ್ಲಿ ಸುಲಭವಾಗಿ ಅಳವಡಿಸಬಹುದಾದ ‘ಟ್ರೈಕೂಲ್‌’ ಕೂಲರ್‌ ಪರಿಚಯಿಸಲಾಗಿದೆ. ಈ ಕೂಲರ್‌ ಅನ್ನು  ಕಿಟಕಿಗಳಲ್ಲಿ ಸುಲಭವಾಗಿ ಅಳವಡಿಸಬಹುದಾಗಿದೆ. ಹೀಗಾಗಿ ಇತರ ಕೂಲರ್‌ಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ.

ಇದೊಂದು ದೇಶದ ಮೊದಲ ವಿಂಡೊ ಕೂಲರ್‌. ಕೋಣೆ ಒಳಗೆ ಇರಿಸುವ ಪ್ಲಾಸ್ಟಿಕ್‌ ಕೂಲರ್‌ಗಳಿಗಿಂತ ಇದು ಭಿನ್ನವಾಗಿದೆ. ಬೇಸಿಗೆ ಮುಗಿದ ನಂತರವೂ ಇದನ್ನು ಸ್ಥಳಾಂತರಿಸದೆ ಕಿಟಕಿಯಲ್ಲಿ ಇರಿಸಬಹುದು. ವಿಂಡೊ ಏ.ಸಿ ಬೆಲೆ ₹ 12,500 ಇದೆ. ದೇಶದಾದ್ಯಂತ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ಈ ಹೊಸ ವಿನ್ಯಾಸದ ಉತ್ಪನ್ನಗಳನ್ನು ತಯಾರಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ಮ್ಯಾಥ್ಯೂವ್‌ ಜಾಬ್‌ ಹೇಳಿದ್ದಾರೆ.

ಫ್ಯಾನ್‌ಗಳ ಬೆಲೆ ₹ 2,375 ಮತ್ತು ₹ 2,575 ಇದೆ.

‘ಕರ್ನಾಟಕದಲ್ಲಿ ಸಂಸ್ಥೆಯ ಮಾರು ಕಟ್ಟೆ ಉತ್ತಮ ಪ್ರಗತಿ ದಾಖಲಿಸುತ್ತಿದೆ. ಪ್ರೀಮಿಯಂ ಉತ್ಪನ್ನಗಳಿಗೆ ಇಲ್ಲಿ ಉತ್ತಮ ಬೇಡಿಕೆ ಇದೆ. ಮಾರುಕಟ್ಟೆ ವಿಸ್ತರಿಸಲು ಹೆಚ್ಚು ಮಳಿಗೆಗಳಲ್ಲಿ ಸಂಸ್ಥೆಯ ಫ್ಯಾನ್‌ಗಳು ದೊರೆಯುವಂತೆ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.