ಸಿಪಿಐ (ಎಂಎಲ್‌) ಪ್ರಣಾಳಿಕೆ ಬಿಡುಗಡೆ

7

ಸಿಪಿಐ (ಎಂಎಲ್‌) ಪ್ರಣಾಳಿಕೆ ಬಿಡುಗಡೆ

Published:
Updated:

ಬೆಂಗಳೂರು: ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) (ಎಮ್‌ಎಲ್‌)ದ ಪ್ರಣಾಳಿಕೆಯನ್ನು ರಾಜ್ಯ ಘಟಕದ ಅಧ್ಯಕ್ಷ ಕ್ಲಿಪ್ಟನ್‌ ಡಿ ರೊಜಾರಿಯೋ ಬಿಡುಗಡೆ ಮಾಡಿದರು.

ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು

* ಕೆಲಸ ಮಾಡದ ಪ್ರತಿನಿಧಿಗಳ ಸದಸ್ಯತ್ವವನ್ನು ರದ್ದು ಮಾಡುವ ಹಕ್ಕನ್ನು ಮತದಾರರಿಗೆ ನೀಡುವಂತೆ ಹೋರಾಟ

* ಕೆ.ಜಿ ಇಂದ ಪಿ.ಜಿ ವರೆಗೆ  ಉಚಿತ ಶಿಕ್ಷಣ

* ಎಲ್ಲರಿಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಿಗುವಂತೆ ನೋಡಿಕೊಳ್ಳುವುದು

* ಒತ್ತುವರಿಯಾದ ಸರ್ಕಾರಿ ಜಮೀನನ್ನು ಸಾರ್ವಜನಿಕರಿಗೆ ಹಂಚುವುದು

* ಸ್ಲಂ ನಿವಾಸಿಗಳಿಗೆ ತಾವು ವಾಸಿಸುತ್ತಿರುವ ಮನೆಗೆ ಹಕ್ಕುಪತ್ರ ನೀಡುವುದು

* ಗಗನಕ್ಕೇರಿದ ಮನೆ ಬಾಡಿಗೆಯನ್ನು ನಿಯಂತ್ರಣಕ್ಕೆ ತರುವುದು

* ಅಂತರ್ಜಾತಿಯ ವಿವಾಹವನ್ನು ಪ್ರೋತ್ಸಾಹಿಸಲಾಗುವುದು. ಇದಕ್ಕೆ ಸಂಬಂಧಿಸಿ ನಡೆಯುವ ಹತ್ಯೆಗಳನ್ನು ನಿಲ್ಲಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry