ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಲ್‌ ಮಿಂಚು; ಕೆಕೆಆರ್‌ಗೆ ಗೆಲುವು

ಚಾವ್ಲಾ, ಸುನಿಲ್‌ಗೆ ತಲಾ ಎರಡು ವಿಕೆಟ್
Last Updated 3 ಮೇ 2018, 20:16 IST
ಅಕ್ಷರ ಗಾತ್ರ

ಕೋಲ್ಕತ್ತ: ಶುಭಮನ್ ಗಿಲ್‌ (57; 36ಎ; 2 ಸಿ, 6 ಬೌಂ) ಮತ್ತು ನಾಯಕ ದಿನೇಶ್ ಕಾರ್ತಿಕ್ (45; 18 ಎ, 1 ಸಿ, 7 ಬೌಂ) ಅವರ ಅಮೋಘ ಆಟದ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಗಳಿಸಿತು.

ಗುರುವಾರ ರಾತ್ರಿ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡದವರು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರು ವಿಕೆಟ್‌ಗಳಿಂದ ಗೆದ್ದರು.

178 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೆಕೆಆರ್‌ 17.4 ಓವರ್‌ಗಳಲ್ಲಿ ಜಯದ ನಗೆ ಸೂಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಪರವಾಗಿ ನಾಯಕ ಮಹೇಂದ್ರಸಿಂಗ್ ದೋನಿ (43; 25ಎ,1ಬೌಂ, 4ಸಿ) ಮತ್ತೆ ಮಿಂಚಿದರು.

ಶೇನ್ ವಾಟ್ಸನ್ (36; 25ಎ, 4ಬೌಂ, 2ಸಿ) ಮತ್ತು ಫಾಫ್ ಡು ಪ್ಲೆಸಿ (27; 15ಎ,4ಬೌಂ, 1ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 48 ರನ್ ಗಳಿಸಿದರು.

ಡುಪ್ಲೆಸಿ ಔಟಾದ ನಂತರ ವಾಟ್ಸನ್‌ ಜೊತೆಗೂಡಿದ ಸುರೇಶ್ ರೈನಾ (31; 26ಎ, 4ಬೌಂ) ಕೂಡ ರನ್‌ ಗಳಿಸುವತ್ತ ಚಿತ್ತ ನೆಟ್ಟರು. ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಎಚ್ಚರಿಕೆಯಿಂದ ಆಡಿ ರನ್‌ ಗಳಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 43 ರನ್‌ಗಳನ್ನು ಪೇರಿಸಿದರು.

ಸುನಿಲ್ ನಾರಾಯಣ್ ಎಸೆತದಲ್ಲಿ ವಾಟ್ಸನ್‌ ಔಟಾದರು. 12ನೇ ಓವರ್‌ನಲ್ಲಿ ಸುರೇಶ್ ರೈನಾ ಕೂಡ ಔಟಾದರು. ಕ್ರೀಸ್‌ನಲ್ಲಿದ್ದ ಅಂಬಟಿ ರಾಯುಡು (21;17ಎ,3ಬೌಂ) ಜೊತೆಗೂಡಿದ ದೋನಿ ಬೌಲರ್‌ಗಳಿಗೆ ಸವಾಲೊಡ್ಡಿದರು. ರಾಯುಡು ಜೊತೆಗೆ 4ನೇ ವಿಕೆಟ್‌ಗೆ ಅವರು 19 ರನ್ ಮತ್ತು ಜಡೇಜರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ  52 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 177 (ಶೇನ್ ವಾಟ್ಸನ್‌ 36, ಫಾಫ್ ಡುಪ್ಲೆಸಿ 27, ಸುರೇಶ್ ರೈನಾ 31, ಅಂಬಟಿ ರಾಯುಡು 21, ಮಹೇಂದ್ರಸಿಂಗ್ ದೋನಿ 43, ರವೀಂದ್ರ ಜಡೇಜ 12,  ಪಿಯೂಷ್ ಚಾವ್ಲಾ 35ಕ್ಕೆ2, ಸುನಿಲ್ ನಾರಾಯಣ್ 20ಕ್ಕೆ2, ಕುಲದೀಪ್ ಯಾದವ್ 34ಕ್ಕೆ1)

ಕೆಕೆಆರ್‌: 17.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 180 (ಸುನಿಲ್ ನಾರಾಯಣ್‌ 32, ಶುಭಮನ್ ಗಿಲ್ ಔಟಾಗದೆ 57, ದಿನೇಶ್ ಕಾರ್ತಿಕ್‌ ಔಟಾಗದೆ 45).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT