ಹಾವು, ಚೇಳುಗಳ ಕಾಟ: ಮಳೆ ನೀರಿನೊಂದಿಗೆ ಬರುವ ಹಾವು ಚೇಳುಗಳು ಇಲ್ಲಿನ ನಿವಾಸಿಗಳ ನಿದ್ದೆಗೆಡಿಸಿದೆ. ಮೋರಿ ನೀರು ಸರಾಗವಾಗಿ ಹರಿದು ಹೋದರೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಇಲ್ಲಿ ಬಂದು ನೀರು ನಿಂತುಕೊಳ್ಳುವುದರಿಂದ ಹಾವು, ಚೇಳುಗಳ ಭೀತಿ ಇದೆ. ಇನ್ನು ಒಂದು ದಿನ ಕಳೆದರೆ ಇಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಸಾಂಕ್ರಮಿಕ ರೋಗ ಹರಡುವ ಭೀತಿ ಇದೆ ಎಂದು ಸ್ಥಳೀಯ ನಿವಾಸಿ ಸವಿತಾ ಹೇಳಿದರು.