ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಜೀವ ಬೆದರಿಕೆ ಕರೆ

7
ನಾಲ್ಕೈದು ಬೇರೆ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ

ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಜೀವ ಬೆದರಿಕೆ ಕರೆ

Published:
Updated:
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಜೀವ ಬೆದರಿಕೆ ಕರೆ

ಚಿತ್ರದುರ್ಗ: ಸ್ಥಳೀಯ ಶಾಸಕ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಗುರುವಾರ ನಾಲ್ಕು ಮೊಬೈಲ್ ಸಂಖ್ಯೆಗಳಿಂದ ಅಪರಿಚಿತರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ

ಬೆಳಿಗ್ಗೆ 7.30 ರಿಂದ 8 ಗಂಟೆಯೊಳಗೆ ಮತ್ತು ಬೆಳಿಗ್ಗೆ 11.30ಕ್ಕೆ ಪ್ರತ್ಯೇಕ ಮೊಬೈಲ್ ಸಂಖ್ಯೆಗಳ ಮೂಲಕ ಶಾಸಕರೇ ನಿಮಗೆ ಬಾಂಬ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಿಮಗೆ ಉಳಿಗಾಲವಿಲ್ಲ ಎಂಬುದಾಗಿ ಮತ್ತೆ ಕರೆ ಮಾಡಿ ಹೆದರಿಸಿದ್ದಾರೆ.

ನಾಲ್ಕು ಬಾರಿ ಅಪರಿಚಿತರಿಂದ ಕರೆ ಬಂದ ಹಿನ್ನೆಲೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪುತ್ರ ಡಾ. ಸಿದ್ದಾರ್ಥ್ ಗುಂಡರ್ಪಿ ಅವರು ಅಪರಿಚಿತರನ್ನು ಪತ್ತೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry