ರಂಗೇರಿದ ಪ್ರಚಾರ ಕಣ

7

ರಂಗೇರಿದ ಪ್ರಚಾರ ಕಣ

Published:
Updated:

ಹುಬ್ಬಳ್ಳಿ: ’ಜಗದೀಶ ಶೆಟ್ಟರ್ ಅವರ ಅವಧಿಯಲ್ಲಿ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರವು ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಟೀಕಿಸಿದರು.

ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ. ಮಹೇಶ ನಾಲವಾಡ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಾಲವಾಡ ಅವರು ಸಭ್ಯ ರಾಜಕಾರಣಿಯಾಗಿದ್ದು, ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದಾರೆ. ಹಾಗಾಗಿ, ಅವರನ್ನು ಗೆಲ್ಲಿಸಬೇಕು. ಅವರ ಗೆಲುವು ನನ್ನ ಗೆಲುವು ಕೂಡ ಆಗಿದೆ’ ಎಂದರು.

ಮುಖಂಡ ವೀರಣ್ಣ ಮತ್ತೀಕಟ್ಟಿ, ಎ.ಎಂ. ಹಿಂಡಸಗೇರಿ ಮಾತನಾಡಿದರು. ಸ್ಥಳೀಯ ಬಿಜೆಪಿ ಮುಖಂಡ ಜೆ.ಡಿ. ಪಾಟೀಲ ಕಾಂಗ್ರೆಸ್ ಸೇರ್ಪಡೆಯಾದರು.

ಕಾಡಯ್ಯ ಹಿರೇಮಠ, ಎಐಸಿಸಿ ರಾಜ್ಯ ವಕ್ತಾರ ಪವನ್ ಖೇರ್, ಎಚ್.ವಿ. ಮಾಡಳ್ಳಿ, ಅರವಿಂದ ಕಟಗಿ, ಎಚ್‌.ಕೆ ಜೈನ್, ಗೋವಿಂದ ಮಣ್ಣೂರ, ಸುನೀತಾ ಹುರಿಕಡ್ಲಿ ಹಾಗೂ ಮಹೇಂದ್ರ ಸಿಂಘಿ ಇದ್ದರು.

ಅಬ್ಬಯ್ಯ ಮತಯಾಚನೆ:

ಬಿಡ್ನಾಳ, ಮಾರುತಿ ನಗರ, ಲಕ್ಷ್ಮಿನಗರ, ಹೇಮರೆಡ್ಡಿ ಮಲ್ಲಮ್ಮ ಕಾಲೊನಿ, ಸೋನಿಯಾ ಗಾಂಧಿ ನಗರದ ಸುತ್ತಲಿನ ಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಪ್ರಸಾದ ಅಬ್ಬಯ್ಯ ಗುರುವಾರ ಮತ ಯಾಚಿಸಿದರು.

ಕೊರವಿ ಪ್ರಚಾರ:

ಕೃಷ್ಣಾನಗರದಲ್ಲಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಇಲ್ಲಿನ ನಿವಾಸಿಗಳು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣಾ ಕೊರವಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಇದಕ್ಕೆ  ಪ್ರತಿಕ್ರಿಯಿಸಿದ ರಾಜಣ್ಣಾ ಕೊರವಿ, ‘ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿದರೆ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವೆ’ ಎಂದು ಭರವಸೆ ನೀಡಿದರು.

ಗೋಕಾಕ ಮತ ಯಾಚನೆ:

ಪೂವ೯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಗೋಕಾಕ ಅವರು, ಗುರುವಾರ ಕಮಡೋಳಿ ಗಲ್ಲಿಯಲ್ಲಿ ಪ್ರಚಾರ ಮಾಡಿ ಮತ ಯಾಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry