ಕಾರವಾರದಲ್ಲಿ ₹ 18 ಸಾವಿರ ಮೌಲ್ಯದ ಮದ್ಯ ವಶ

7

ಕಾರವಾರದಲ್ಲಿ ₹ 18 ಸಾವಿರ ಮೌಲ್ಯದ ಮದ್ಯ ವಶ

Published:
Updated:

ಕಾರವಾರ: ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯ 33 ಪ್ರದೇಶಗಳಲ್ಲಿ ಬುಧವಾರ ದಾಳಿ ನಡೆಸಿದ್ದು, ಎಂಟು ಪ್ರಕರಣ ದಾಖಲಿಸಿಕೊಂಡಿದ್ದಾರೆ. ₹ 18 ಸಾವಿರ ಮೌಲ್ಯದ 59.60 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ರೈಲ್ವೆ ಪೊಲೀಸ್‍ ನಿರೀಕ್ಷಕರು ಶಿರವಾಡ ರೈಲು ನಿಲ್ದಾಣದಲ್ಲಿ 30.750 ಲೀಟರ್ ಗೋವಾ ಮದ್ಯ, 20.250 ಲೀಟರ್ ಗೋವಾ ಫೆನ್ನಿ ಮತ್ತು 5 ಲೀಟರ್ ಗೋವಾ ಬಿಯರ್ ಜಪ್ತಿ ಮಾಡಿದ್ದಾರೆ. ಅಂದಾಜು ಮೌಲ್ಯ ₹ 17 ಸಾವಿರ ಎನ್ನಲಾಗಿದೆ. ಅದನ್ನು ಕಾರವಾರ ವಲಯ ಕಚೇರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಗಂಭೀರ ಮೊಕದ್ದಮೆ ದಾಖಲಾಗಿದೆ. ಆರೋಪಿ ಪತ್ತೆಯಾಗಿಲ್ಲ.

ಅಬಕಾರಿ ಇಲಾಖೆಯ ಶಿರಸಿ ವಲಯ ಅಧಿಕಾರಿಗಳು ಸಿದ್ದಾಪುರ ತಾಲ್ಲೂಕಿನ ಲಂಬಾಪುರದ ಮಾಸ್ತಿಹಕ್ಲು ರಸ್ತೆಯಲ್ಲಿ  2.5 ಲೀ ದೇಸಿ ಮದ್ಯ  ಜಪ್ತಿ ಮಾಡಿದ್ದಾರೆ. ಆರೋಪಿಯ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು

ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry