ಹೆಲಿಕಾಪ್ಟರ್‌ನಿಂದ ಇಳಿವಾಗ ಕಾಲುಜಾರುತ್ತಿದ್ದ ಸ್ಮೃತಿ ಇರಾನಿಗೆ ನೆರವಾದ ಪೈಲಟ್‌

7

ಹೆಲಿಕಾಪ್ಟರ್‌ನಿಂದ ಇಳಿವಾಗ ಕಾಲುಜಾರುತ್ತಿದ್ದ ಸ್ಮೃತಿ ಇರಾನಿಗೆ ನೆರವಾದ ಪೈಲಟ್‌

Published:
Updated:
ಹೆಲಿಕಾಪ್ಟರ್‌ನಿಂದ ಇಳಿವಾಗ ಕಾಲುಜಾರುತ್ತಿದ್ದ ಸ್ಮೃತಿ ಇರಾನಿಗೆ ನೆರವಾದ ಪೈಲಟ್‌

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಹೆಲಿಪ್ಯಾಡ್‌ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಲು ಜಾರಿಬೀಳುತ್ತಿದ್ದ ಘಟನೆ ನಡೆದಿದೆ.

ಸ್ಮೃತಿ ಇರಾನಿ ನವಲಗುಂದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಪ್ರಚಾರ ಮಾಡಲು ಹುಬ್ಬಳ್ಳಿಯ ವಿಮಾಣನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಅಣ್ಣಿಗೇರಿ ಎಪಿಎಂಸಿ ಹೆಲಿಪ್ಯಾಡ್‌ಗೆ ಬಂದಿದ್ದರು.

ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೆನಕೊಪ್ಪ ಪರ ಇಂದು ಕ್ಷೇತ್ರದ ಹಲವೆಡೆ ಚುನಾವಣಾ ಪ್ರಚಾರ ನಿಮಿತ್ತ ಹುಬ್ಬಳ್ಳಿ ವಿಮಾನನಿಲ್ದಾಣದಿಂದ ಅಣ್ಣಿಗೇರಿ ಎಪಿಎಂಸಿ ಹೆಲಿಪ್ಯಾಡ್‌ಗೆ ಬಂದ ಅವರು, ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿಯುವಾಗ ಜಾರಿ ಬೀಳುತ್ತಿದ್ದ ಅವಘಡ ನಡೆದಿದೆ.

ಕಾಲು ಜಾರುತ್ತಿದ್ದಂತೆ ನೆರವಾದ ಸಹ ಪೈಲಟ್, ಸ್ಮೃತಿ ಅವರು ಜಾರದಂತೆ ತಡೆದರು. ಅವರ ನೆರವಿನಿಂದ ಕೆಳಗಿಳಿದ ಸ್ಮೃತಿ ಯಾಕೆ ಕಾಲು ಜಾರಿತು ಎಂದು ಕೆಲ ಸೆಕೆಂಡು ಕೆಳೆಗೆ ನೋಡಿ, ಸಹ ಪೈಲಟ್‌ ಜತೆ ಮಾತನಾಡಿದರು. ತಕ್ಷಣ ಅಲ್ಲಿಂದ ಸ್ವಾಗತಿಸಲು ಬಂದಿದ್ದ ಪಕ್ಷದ ಮುಖಂಡರತ್ತ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry