ಜೆಡಿಎಸ್‌ನಿಂದ ಅಧಿಕಾರ; ಬಿಜೆಪಿ ಪರ ಪ್ರಚಾರ

ಲಿಂಗಸುಗೂರು: ‘ಜೆಡಿಎಸ್‌ನಿಂದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಗೀತಾ ಕರಿಯಪ್ಪ ಅವರು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ ಪರ ಪ್ರಚಾರ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಟೀಕಿಸಿದರು.
ಗುರುವಾರ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಸಹೋದರನ ಹೆಂಡತಿ ಗೀತಾ ವಜ್ಜಲರಿಗೆ ಅಧಿಕಾರ ಕೊಡಿಸಿದ್ದು, ಗೀತಾ ವಜ್ಜಲ ಋಣ ತೀರಿಸಲು ಮುಂದಾಗಿದ್ದಾರೆ. ಮತದಾರರು ಗೀತಾ ವಜ್ಜಲ ಅವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮಾನಪ್ಪ ವಜ್ಜಲ ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬಂದವರಲ್ಲ. ತಮ್ಮ ಉದ್ಯಮಗಳ ರಕ್ಷಣೆಗಾಗಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಹನುಮಂತಪ್ಪ ಆಲ್ಕೋಡ ಮಾತನಾಡಿ, ‘ಒಂದು ದಶಕದ ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ ಬಿಜೆಪಿ ಶಾಸಕರು ಅಭಿವೃದ್ಧಿಗೆ ಕಿಂಚಿತ್ತು ಕೆಲಸ ಮಾಡಿಲ್ಲ. ಗ್ರಾಮೀಣ ರಸ್ತೆಗಳು, ಕುಡಿವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ’ ಎಂದು ಆರೋಪಿಸಿದರು.
ಸಂಸದ ಬಿ.ವಿ.ನಾಯಕ, ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಮಾಜಿ ಶಾಸಕ ಹಸನ್‌ಸಾಬ ದೋಚಿಹಾಳ, ಅಭ್ಯರ್ಥಿ ಡಿ.ಎಸ್. ಹೂಲಗೇರಿ, ಅಬ್ದುಲ್‌ಅಲಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ, ಕೆಪಿಸಿಸಿ ಕಾರ್ಯದರ್ಶಿ ಎಚ್.ಬಿ.ಮುರಾರಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮಿ ದೇಸಾಯಿ, ಮುಖಂಡರಾದ ಭೂಪನಗೌಡ ಕರಡಕಲ್ಲ, ಖಾದರಪಾಷ, ಲಾಲ ಅಹ್ಮದಸಾಬ, ಶರಣಬಸಪ್ಪ ಗುಡದನಾಳ, ಮಲ್ಲಣ್ಣ ವಾರದ, ಸಿದ್ದನಗೌಡ ಪೊಲೀಸ ಪಾಟೀಲ, ಪಾಮಯ್ಯ ಮುರಾರಿ, ಚೆನ್ನವೀರಪ್ಪ ಪಾಗದ, ಅಮರಗುಂಡಪ್ಪ ಮೇಟಿ, ಸಂಗಣ್ಣ ಬಯ್ಯಾಪುರ, ರವೂಫ್ ಗ್ಯಾರಂಟಿ, ಸೋಮಶೇಖರ ಐದನಾಳ, ವಾಸಿಂಪಾಷ, ಚೆನ್ನಾರೆಡ್ಡಿ, ಪರಶುರಾಮ, ಪ್ರಮೋದ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.